Publish Date: Fri, 06 Aug 2021 (11:25 IST)
Updated Date: Fri, 06 Aug 2021 (09:27 IST)
ಮುಂಬೈ: ಶ್ರೀಲಂಕಾ ಪ್ರವಾಸ ವೇಳೆ ಕೊರೋನಾ ಸೋಂಕಿತರಾಗಿದ್ದ ಟೀಂ ಇಂಡಿಯಾ ಆಲ್ ರೌಂಡರ್ ಕೃನಾಲ್ ಪಾಂಡ್ಯ ಈಗ ಚೇತರಿಸಿಕೊಂಡಿದ್ದು ತವರಿಗೆ ವಾಪಸಾಗಿದ್ದಾರೆ.
ಕೃನಾಲ್ ದ್ವಿತೀಯ ಟಿ20 ಪಂದ್ಯಕ್ಕೆ ಮೊದಲು ಕೊರೋನಾ ಸೋಂಕಿತರಾಗಿದ್ದರು. ಅವರೊಂದಿಗೆ ಒಡನಾಡಿದ್ದ ಯಜುವೇಂದ್ರ ಚಾಹಲ್, ಕೃಷ್ಣಪ್ಪ ಗೌತಮ್ ಕೂಡಾ ಸೋಂಕಿತರಾಗಿದ್ದರು.
ಇದರಿಂದಾಗಿ ಇತರ ತಂಡದ ಸದಸ್ಯರೊಂದಿಗೆ ಕೃನಾಲ್ ಭಾರತಕ್ಕೆ ಬಂದಿರಲಿಲ್ಲ. ಸೋಂಕಿತ ಕ್ರಿಕೆಟಿಗರು ಲಂಕಾದಲ್ಲಿಯೇ ಇದ್ದರು. ಇದೀಗ ಕೃನಾಲ್ ಚೇತರಿಸಿಕೊಂಡ ಹಿನ್ನಲೆಯಲ್ಲಿ ಭಾರತಕ್ಕೆ ಬಂದಿದ್ದಾರೆ. ಆದರೆ ಉಳಿದಿಬ್ಬರು ಸೋಂಕಿತ ಕ್ರಿಕೆಟಿಗರು ಇನ್ನೂ ಚೇತರಿಸಿಕೊಂಡಿಲ್ಲ. ಹೀಗಾಗಿ ಲಂಕಾದಲ್ಲಿಯೇ ಇದ್ದಾರೆ.