ರಾಂಚಿ: ಟೀಂ ಇಂಡಿಯಾ ಮಾಜಿ ನಾಯಕ, ಕ್ರಿಕೆಟ್ ದಿಗ್ಗಜ ಎಂ.ಎಸ್. ಧೋನಿ ಅಧಿಕೃತ ಟ್ವಿಟರ್ ಖಾತೆಯಿಂದ ದೃಢೀಕರಣಕ್ಕಾಗಿ ನೀಡುವ ಬ್ಲೂ ಟಿಕ್ ಮಾರ್ಕ್ ಕಿತ್ತು ಹಾಕಲಾಗಿದೆ.
ಇದು ಟ್ವಿಟರಿಗರಲ್ಲಿ ಕೋಲಾಹಲವನ್ನೆಬ್ಬಿಸಿದೆ. ಅಸಲಿಗೆ ಧೋನಿ ಆರು ತಿಂಗಳಿನಿಂದ ತಮ್ಮ ಟ್ವಿಟರ್ ಖಾತೆಯನ್ನು ಬಳಸಿಲ್ಲ. ಯಾವುದೇ ಪೋಸ್ಟ್ ಮಾಡಿಲ್ಲ.
ಈ ಕಾರಣಕ್ಕೆ ಧೋನಿ ಖಾತೆಯಲ್ಲಿದ್ದ ದೃಢೀಕರಣ ಗುರುತನ್ನು ಕಿತ್ತು ಹಾಕಲಾಗಿದೆ. ಧೋನಿ ಸಾಮಾಜಿಕ ಜಾಲತಾಣ ಬಳಸುವುದೇ ಅಪರೂಪ. ತೀರಾ ವಿರಳವಾಗಿ ಇನ್ ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಹಾಕುತ್ತಾರೆ. ಅದೂ ಜನವರಿಯಲ್ಲಿ ಮಾಡಿದ್ದೇ ಕೊನೆಯ ಪೋಸ್ಟ್. ಇದಾದ ಬಳಿಕ ಧೋನಿ ಸೋಷಿಯಲ್ ಮೀಡಿಯಾ ಖಾತೆಯನ್ನೇ ಬಳಸಿಲ್ಲ.