Publish Date: Fri, 06 Aug 2021 (08:50 IST)
Updated Date: Fri, 06 Aug 2021 (08:56 IST)
ಟ್ರೆಂಟ್ ಬ್ರಿಡ್ಜ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟಕ್ಕೆ ಮಳೆ ಅಡ್ಡಿಯಾಗಿದೆ. ಇದರಿಂದಾಗಿ ನಿನ್ನೆಯ ದಿನದಾಟ ಅರ್ಧಕ್ಕೇ ನಿಂತಿದೆ.
ನಿನ್ನೆಯ ದಿನದಂತ್ಯಕ್ಕೆ ಭಾರತ 4 ವಿಕೆಟ್ ಕಳೆದುಕೊಂಡು 125 ರನ್ ಗಳಿಸಿತ್ತು. ಆರಂಭಿಕರಾಗಿ ಕಣಕ್ಕಿಳಿದ ಕೆಎಲ್ ರಾಹುಲ್ ಅದ್ಭುತ ಆಟವಾಡುತ್ತಿದ್ದು, 151 ಎಸೆತಗಳಿಂದ 57 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ರೋಹಿತ್ ಶರ್ಮಾ ಉತ್ತಮ ಲಯದಲ್ಲಿದ್ದರೂ 36 ರನ್ ಗೆ ವಿಕೆಟ್ ಒಪ್ಪಿಸಿದರು.
ಉಳಿದವರದ್ದು ಠುಸ್ ಪಟಾಕಿ. ಚೇತೇಶ್ವರ ಪೂಜಾರ ಮತ್ತೊಮ್ಮೆ ಕಳಪೆ ಆಟವಾಡಿ 4 ರನ್ ಗೆ ಔಟಾದರೆ ನಾಯಕ ಕೊಹ್ಲಿ ಬಂದ ಬಾಲ್ ಗೇ ಶೂನ್ಯ ಸುತ್ತಿ ಪೆವಿಲಿಯನ್ ಗೆ ಮರಳಿದ್ದಾರೆ. ಅಜಿಂಕ್ಯಾ ರೆಹಾನೆ 5 ರನ್ ಗಳಿಸುವಷ್ಟರಲ್ಲಿ ರನೌಟ್ ಗೆ ಬಲಿಯಾಗಿದ್ದಾರೆ. ಇದೀಗ ರಾಹುಲ್ ಜೊತೆಗೆ 7 ರನ್ ಗಳಿಸಿರುವ ರಿಷಬ್ ಪಂತ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ಭಾರತ ಇಂಗ್ಲೆಂಡ್ ನ ಮೊದಲ ಇನಿಂಗ್ಸ್ ಮೊತ್ತ ದಾಟಲು ಇನ್ನೂ 58 ರನ್ ಗಳಿಸಬೇಕಿದೆ.