Publish Date: Mon, 02 Oct 2023 (08:20 IST)
Updated Date: Mon, 02 Oct 2023 (08:41 IST)
ಮುಂಬೈ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಈಗಾಗಲೇ ಅಭ್ಯಾಸ ಪಂದ್ಯಗಳು ಆರಂಭವಾಗಿದೆ.
ಆದರೆ ನಾಲ್ಕರ ಪೈಕಿ ಮೂರು ಅಭ್ಯಾಸ ಪಂದ್ಯಕ್ಕೆ ಮಳೆ ಅಡ್ಡಿಯಾಗಿತ್ತು. ಹೀಗಾಗಿ ಅಭಿಮಾನಿಗಳಿಗೂ ನಿರಾಸೆಯಾಗಿದೆ. ಹೀಗಾದ್ರೆ ವಿಶ್ವಕಪ್ ಪಂದ್ಯಾವಳಿ ನಡೆಯೋದು ಹೇಗೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಡಕ್ ವರ್ತ್ ಲೂಯಿಸ್ ನಿಯಮ ಅನ್ವಯವಾದಾಗಲೆಲ್ಲಾ ಒಂದು ತಂಡಕ್ಕೆ ಅನ್ಯಾಯವಾಗುತ್ತದೆ. ಹೀಗಾಗಿ ಮಳೆಯಿಂದ ಪಂದ್ಯ ರದ್ದಾದರೂ, ಅರ್ಧ ನಡೆದರೂ ಪೂರ್ತಿ ಆಟದ ಮಜಾ ಸಿಗದು. ಈಗ ದೇಶದಾದ್ಯಂತ ಅಲ್ಲಲ್ಲಿ ಮಳೆಯಾಗುತ್ತಿರುವುದು ಒಂದು ವಾರದ ಬಳಿಕ ಹವಾಮಾನ ಸುಧಾರಿಸಬಹುದು ಎಂಬ ವಿಶ್ವಾಸವಿದೆ.