Publish Date: Sat, 30 Sep 2023 (15:56 IST)
Updated Date: Sat, 30 Sep 2023 (16:04 IST)
ಗುವಾಹಟಿ: ಭಾರತ ಮತ್ತು ಇಂಗ್ಲೆಂಡ್ ನಡುವಿನ ವಿಶ್ವಕಪ್ ಅಭ್ಯಾಸ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. 2 ಗಂಟೆಗೆ ಆರಂಭವಾಗಬೇಕಿದ್ದ ಪಂದ್ಯ ಇನ್ನೂ ಆರಂಭವಾಗಿಲ್ಲ.
ಗುವಾಹಟಿಯಲ್ಲಿ ಮಳೆ ಸುರಿಯುತ್ತಿದ್ದು ಇದುವರೆಗೆ ಟಾಸ್ ಕೂಡಾ ನಡೆದಿಲ್ಲ. ಕೊಂಚ ಮಳೆ ನಿಂತಿದ್ದರಿಂದ ಆಟ ಶುರುವಾಗಬಹುದು ಎಂಬ ಭರವಸೆಯಿತ್ತು. ಆದರೆ ಮತ್ತೆ ಮಳೆ ಹನಿಯಲು ಆರಂಭಿಸಿದ್ದು ನಿರಾಸೆ ತಂದಿದೆ.
ಏಕದಿನ ವಿಶ್ವಕಪ್ ಗೆ ಮೊದಲು ಭಾರತ ತಂಡಕ್ಕೆ ಇದು ಮೊದಲ ಅಭ್ಯಾಸ ಪಂದ್ಯವಾಗಿದೆ. ಸದ್ಯದ ಪರಿಸ್ಥಿತಿ ಗಮನಿಸಿದರೆ ಪಂದ್ಯ ರದ್ದಾದರೂ ಅಚ್ಚರಿಯಿಲ್ಲ.