Publish Date: Sun, 01 Oct 2023 (09:30 IST)
Updated Date: Sun, 01 Oct 2023 (09:34 IST)
ಮುಂಬೈ: ಈ ಬಾರಿ ಏಕದಿನ ವಿಶ್ವಕಪ್ ಗೆ ಕೊನೆಯ ಬಾರಿಗೆ ತಂಡಕ್ಕೆ ಆಯ್ಕೆಯಾದ ರವಿಚಂದ್ರನ್ ಅಶ್ವಿನ್ ವಿಶ್ವಕಪ್ ಬಳಿಕ ನಿವೃತ್ತಿಯ ಸುಳಿವು ನೀಡಿದ್ದಾರೆ.
37 ವರ್ಷದ ಅಶ್ವಿನ್ ಸೀಮಿತ ಓವರ್ ಗಳ ಪಂದ್ಯಗಳಲ್ಲಿ ಸಾಕಷ್ಟು ಅನುಭವ ಪಡೆದಿದ್ದಾರೆ. ಏಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿರುವ ಅಶ್ವಿನ್ ಅನುಭವದ ದೃಷ್ಟಿಯಿಂದಲೇ ಅವರಿಗೆ ಈ ಬಾರಿ ಅವಕಾಶ ನೀಡಲಾಗಿದೆ.
ಈ ಬಗ್ಗೆ ದಿನೇಶ್ ಕಾರ್ತಿಕ್ ಜೊತೆಗಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ಅಶ್ವಿನ್ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದ ಬಗ್ಗೆ ನಾನು ಹೆಚ್ಚು ಯೋಚಿಸುತ್ತಿಲ್ಲ. ನಾನು ನನ್ನ ಕ್ರಿಕೆಟ್ ನ್ನು ಆನಂದಿಸುತ್ತಿದ್ದೇನೆ. ವಿಶ್ವಕಪ್ ನಲ್ಲೂ ಇದನ್ನೇ ಮಾಡಲು ಬಯಸುತ್ತೇನೆ.ಭಾರತಕ್ಕೆ ಇದು ನನ್ನ ಕೊನೆಯ ವಿಶ್ವಕಪ್ ಆಗಿರಬಹುದು. ಹೀಗಾಗಿ ಪಂದ್ಯಾವಳಿಯನ್ನು ಆನಂದಿಸುವುದು ಅತ್ಯಂತ ಮಹತ್ವದ್ದಾಗಿದೆ ಎಂದಿದ್ದಾರೆ. ಆ ಮೂಲಕ ಈ ಏಕದಿನ ವಿಶ್ವಕಪ್ ಬಳಿಕ ರವಿಚಂದ್ರನ್ ಅಶ್ವಿನ್ ನಿವೃತ್ತಿಯಾಗುವ ಸೂಚನೆ ನೀಡಿದ್ದಾರೆ.