Publish Date: Fri, 29 Sep 2023 (10:11 IST)
Updated Date: Fri, 29 Sep 2023 (10:13 IST)
ರಾಜ್ ಕೋಟ್: ಆಸ್ಟ್ರೇಲಿಯಾ ವಿರುದ್ಧ ಮೂರನೇ ಏಕದಿನ ಪಂದ್ಯದ ವೇಳೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು ಫೋನ್ ಕಳ್ಳತನವಾಗಿದೆ ಎಂದು ವರದಿಯಾಗಿದೆ.
ಏಕದಿನ ಪಂದ್ಯಕ್ಕೆ ಮುನ್ನ ರೋಹಿತ್ ಅಭ್ಯಾಸ ನಡೆಸುವ ವೇಳೆ ಯಾರೋ ಖದೀಮರು ರೋಹಿತ್ ರ ದುಬಾರಿ ಐಫೋನ್ ಕದ್ದಿದ್ದಾರೆ. ಈ ವಿಚಾರ ತಕ್ಷಣವೇ ತಂಡದೊಳಗೆ ವೈರಲ್ ಆಗಿತ್ತು ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.
ಆದರೆ ಇದರ ಬಗ್ಗೆ ತಲೆಕೆಡಿಸಿಕೊಳ್ಳದ ರೋಹಿತ್ ಭರ್ಜರಿ ಆಟದ ಮೂಲಕ ಗಮನ ಸೆಳೆದಿದ್ದರು. ರೋಹಿತ್ ಪದೇ ಪದೇ ತಮ್ಮ ಅಮೂಲ್ಯ ವಸ್ತುಗಳನ್ನು ಮರೆತು ಹಲವು ಬಾರಿ ಸುದ್ದಿಯಾಗಿದ್ದು ಇದೆ. ಆದರೆ ಈಗ ಅವರ ಫೋನ್ ಗೇ ಯಾರೋ ಕನ್ನ ಹಾಕಿದ್ದಾರೆ.