Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಜೊಹಾನ್ಸ್ ಬರ್ಗ್: ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಬ್ ಪಂತ್ ಇತ್ತೀಚೆಗಿನ ದಿನಗಳಲ್ಲಿ ರನ್ ಗಳಿಸಿದ್ದೇ ಕಡಿಮೆ. ಕೇವಲ ವಿಕೆಟ್ ಕೀಪಿಂಗ್ ನಲ್ಲಿ ಸದ್ದು ಮಾಡುತ್ತಿರುವ ರಿಷಬ್ ಬ್ಯಾಟಿಂಗ್ ನಲ್ಲಿ ಕಳಪೆ ಮೊತ್ತಕ್ಕೆ ಔಟಾಗುತ್ತಿರುವುದು ಟೀಂ ಇಂಡಿಯಾ ಚಿಂತೆಗೆ ಕಾರಣವಾಗಿದೆ.
ರಿಷಬ್ ಜೊತೆಗೆ ತಂಡದಲ್ಲಿ ವಿಕೆಟ್ ಕೀಪರ್ ಆಗಿ ವೃದ್ಧಿಮಾನ್ ಸಹಾ ಇದ್ದಾರೆ. ಈ ನಡುವೆ ರಿಷಬ್ ರನ್ ಗಳಿಸದೇ ಹೋದರೆ ವೃದ್ಧಿಮಾನ್ ಗೆ ಅವಕಾಶ ನೀಡಬಹುದಾಗಿದೆ.
ಆದರೆ ಇದಕ್ಕೆ ಮೊದಲು ರಿಷಬ್ ಜೊತೆಗೆ ದ್ರಾವಿಡ್ ಮಾತುಕತೆ ನಡೆಸಿದ್ದಾರೆ. ನ್ಯೂಜಿಲೆಂಡ್ ಸರಣಿ ವೇಳೆಯೂ ದ್ರಾವಿಡ್ ಅಭ್ಯಾಸದ ನಡುವೆ ರಿಷಬ್ ಗೆ ಸಾಕಷ್ಟು ಬ್ಯಾಟಿಂಗ್ ಟಿಪ್ಸ್ ನೀಡಿದ್ದರು. ಆದರೂ ರಿಷಬ್ ಬ್ಯಾಟಿಂಗ್ ಸುಧಾರಿಸಿಕೊಂಡಿಲ್ಲ. ರಿಷಬ್ ಶಾಟ್ ಸೆಲೆಕ್ಷನ್ ಬಗ್ಗೆ ದ್ರಾವಿಡ್ ಗೆ ಆಕ್ಷೇಪವಿದೆ. ಇದರ ಬಗ್ಗೆ ಅವರೊಂದಿಗೆ ಮಾತುಕತೆ ನಡೆಸುವುದಾಗಿ ದ್ರಾವಿಡ್ ಹೇಳಿದ್ದಾರೆ.