ಜೊಹಾನ್ಸ್ ಬರ್ಗ್: ದ.ಆಫ್ರಿಕಾ ವಿರುದ್ಧ ದ್ವಿತೀಯ ಟೆಸ್ಟ್ ನ ದ್ವಿತೀಯ ಇನಿಂಗ್ಸ್ ನಲ್ಲಿ ಅರ್ಧಶತಕ ಗಳಿಸಿದ್ದು, ಕಳಪೆ ಫಾರ್ಮ್ ನಲ್ಲಿದ್ದ ಚೇತೇಶ್ವರ ಪೂಜಾರ ಆತ್ಮವಿಶ್ವಾಸ ಹೆಚ್ಚಿಸಿದೆ. ಇದೇ ಆತ್ಮವಿಶ್ವಾಸದಲ್ಲಿ ನಿನ್ನೆಯ ದಿನದಾಟದ ಬಳಿಕ ಪೂಜಾರ ಮಾಧ‍್ಯಮಗಳನ್ನು ಎದುರಿಸಿದ್ದಾರೆ.
ಇಷ್ಟು ದಿನ ಪೂಜಾರರನ್ನು ಕಳಪೆ ಫಾರ್ಮ್ ನಿಂದಾಗಿ ಕಿತ್ತೊಗೆಯಬೇಕು ಎಂದು ಸಾಕಷ್ಟು ಒತ್ತಾಯಗಳು ಕೇಳಿಬರುತ್ತಿತ್ತು. ಇದರ ಬಗ್ಗೆ ಈ ಪತ್ರಿಕಾಗೋಷ್ಠಿಯಲ್ಲಿ ಪೂಜಾರ ಖಡಕ್ ಉತ್ತರ ನೀಡಿದ್ದಾರೆ.
ಫಾರ್ಮ್ ಎನ್ನುವುದು ತಾತ್ಕಾಲಿಕ. ಕ್ಲಾಸ್ ಎನ್ನುವುದು ಶಾಶ್ವತ. ನನಗೆ ಮತ್ತು ರೆಹಾನೆ ವಿಚಾರದಲ್ಲಿ ಇದು ಅನ್ವಯವಾಗುತ್ತದೆ. ಎಲ್ಲರಿಗೂ ಒಂದು ಕೆಟ್ಟ ದಿನವೆಂದು ಇರುತ್ತದೆ. ನಮಗೂ ಇತ್ತು. ಆದರೆ ನಮಗೆ ಟೀಂ ಮ್ಯಾನೇಜ್ ಮೆಂಟ್ ಬೆಂಬಲವಿತ್ತು. ಸರಿಯಾದ ರೀತಿಯಲ್ಲಿ ಸಾಗಿದರೆ ರನ್ ಹರಿದುಬರುತ್ತದೆ ಎಂದು ನಮಗೆ ಗೊತ್ತಿತ್ತು. ಇದು ಮುಂದುವರಿಯುತ್ತದೆ ಎಂಬ ವಿಶ್ವಾಸವಿದೆ ಎಂದು ಟೀಕಾಕಾರರಿಗೆ ತಿರುಗೇಟು ಕೊಟ್ಟಿದ್ದಾರೆ.