ಜೊಹಾನ್ಸ್ ಬರ್ಗ್: ಭಾರತ ಮತ್ತು ದ.ಆಫ್ರಿಕಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯ ಮೂರನೇ ದಿನದಂತ್ಯಕ್ಕೆ ಕುತೂಹಲಕಾರಿ ಘಟ್ಟಕ್ಕೆ ತಲುಪಿದೆ. ಇಂದು ಕ್ಲೈಮ್ಯಾಕ್ಸ್ ನಡೆಯಲಿದೆ.
ನಿನ್ನೆಯ ದಿನದಂತ್ಯಕ್ಕೆ ಭಾರತ ನೀಡಿದ್ದ 240 ರನ್ ಗಳ ಗುರಿ ಬೆನ್ನತ್ತಿದ್ದ ಆಫ್ರಿಕಾ 2 ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿ ದಿನದಾಟ ಮುಗಿಸಿತ್ತು. ಇದೀಗ ಆಫ್ರಿಕಾಗೆ ಗೆಲ್ಲಲು 122 ರನ್ ಗಳು ಬೇಕಾಗಿದೆ. ಸದ್ಯಕ್ಕೆ ಡೀನ್ ಎಲ್ಸರ್ 46 ರನ್ ಗಳಿಸಿ ಭಾರತೀಯ ಬೌಲರ್ ಗಳನ್ನು ಕಾಡುತ್ತಿದ್ದಾರೆ.
ಆದರೆ ಆಫ್ರಿಕನ್ನರಿಗೂ ಟೀಂ ಇಂಡಿಯಾ ವೇಗಿಗಳನ್ನು ಎದುರಿಸುವುದು ಕಷ್ಟವಾಗುತ್ತಿದೆ. ಹೀಗಾಗಿ ಇದು ವೇಗಿಗಳು ಮತ್ತು ಬ್ಯಾಟರ್ ಗಳ ನಡುವಿನ ಕಾದಾಟವಾಗಿದೆ. ಇಂದಿನ ದಿನದಾಟದಲ್ಲಿ ಭಾರತ ಎಷ್ಟು ಬೇಗ ವಿಕೆಟ್ ಕಬಳಿಸುತ್ತದೋ ಅಷ್ಟು ಬೇಗ ಜಯ ಗಳಿಸಬಹುದು. ಇಲ್ಲದೇ ಹೋದರೆ ಸೋಲೇ ಕಟ್ಟಿಟ್ಟ ಬುತ್ತಿ ಎಂಬ ಪರಿಸ್ಥಿತಿಯಾಗಿದೆ.