Publish Date: Wed, 06 Jul 2022 (08:10 IST)
Updated Date: Wed, 06 Jul 2022 (08:47 IST)
ಬರ್ಮಿಂಗ್ ಹ್ಯಾಮ್: ಇಂಗ್ಲೆಂಡ್ ವಿರುದ್ಧ ಐದನೇ ಟೆಸ್ಟ್ ಪಂದ್ಯವನ್ನು ಸೋತ ಬಳಿಕ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ತಮ್ಮ ಬ್ಯಾಟಿಗರನ್ನು ದೂಷಿಸಿದ್ದಾರೆ.
ಮೊದಲ ಇನಿಂಗ್ಸ್ ನಲ್ಲಿ ಅಗ್ರ ಕ್ರಮಾಂಕ ವಿಫಲವಾದಾಗ ಕೆಳ ಕ್ರಮಾಂಕದ ಬ್ಯಾಟಿಗರು ತಂಡಕ್ಕೆ ರನ್ ಗಳಿಸಿಕೊಟ್ಟಿದ್ದರು. ಆದರೆ ಎರಡನೇ ಇನಿಂಗ್ಸ್ ನಲ್ಲಿ ತಂಡದ ಬ್ಯಾಟಿಂಗ್ ಪ್ರದರ್ಶನ ನಿರಾಶಾದಾಯಕವಾಗಿತ್ತು.
ಹೀಗಾಗಿ ಪಂದ್ಯದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ರಾಹುಲ್ ದ್ರಾವಿಡ್, ತಂಡದ ಬ್ಯಾಟಿಂಗ್ ಕುಸಿತವೇ ಸೋಲಿಗೆ ಕಾರಣವಾಯ್ತು ಎಂದಿದ್ದಾರೆ. ಅಲ್ಲದೆ, ಎರಡನೇ ಸರದಿಯಲ್ಲಿ ಬ್ಯಾಟಿಂಗ್ ಕುಸಿತಕ್ಕೆ ಕಾರಣವೇನೆಂದು ಪರಾಮರ್ಶಿಸುವುದಾಗಿ ಹೇಳಿದ್ದಾರೆ.