Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬರ್ಮಿಂಗ್ ಹ್ಯಾಮ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೇವಲ ಸ್ಲೆಡ್ಜಿಂಗ್ ಮೂಲಕವೇ ಗಮನ ಸೆಳೆದರು. ಆ ಆಕ್ರಮಣಕಾರಿ ವರ್ತನೆಯನ್ನು ಅವರು ಬ್ಯಾಟಿಂಗ್ ನಲ್ಲಿ ತೋರಿದ್ದರೆ ಟೀಂ ಇಂಡಿಯಾಗೆ ಈ ಸ್ಥಿತಿ ಬರುತ್ತಿರಲಿಲ್ಲವೇನೋ.
ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ತಂಡದ ಬ್ಯಾಟಿಂಗ್ ಜವಾಬ್ಧಾರಿಯನ್ನು ಕೊಹ್ಲಿ ಹೊತ್ತುಕೊಳ್ಳಬೇಕಿತ್ತು. ಆದರೆ ಅನುಭವಿ ಆಟಗಾರರಾದ ಅವರು ಎರಡೂ ಇನಿಂಗ್ಸ್ ಗಳಲ್ಲಿ ವಿಫಲರಾದರು. ಕೇವಲ ಸ್ಲೆಡ್ಜಿಂಗ್ ಮಾಡುತ್ತಿದ್ದರೆ ಆಟ ಗೆಲ್ಲಲು ಸಾಧ‍್ಯವಿಲ್ಲ ಎಂಬುದನ್ನು ಕೊಹ್ಲಿ ಅರಿತುಕೊಳ್ಳಬೇಕು ಎಂಬುದಾಗಿ ನೆಟ್ಟಿಗರೂ ಟಾಂಗ್ ಕೊಟ್ಟಿದ್ದಾರೆ.
ಸೋಲಿಗೆ ಅನೇಕ ಕಾರಣಗಳಿರಬಹುದು. ಆದರೆ ಕೊಹ್ಲಿಯಂತಹ ಬ್ಯಾಟಿಗರಿಗೆ ತಂಡ ಕೊಡುತ್ತಿರುವ ಗೌರವ, ಮನ್ನಣೆ ಅರಿತು ಅವರು ರನ್ ಗಳಿಸದೇ ಇದ್ದರೆ ಭಾರತಕ್ಕೆ ಇಂತಹ ಸೋಲುಗಳು ಸಾಮಾನ್ಯವಾಗಬಹುದು.