Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೈಗೆ ಬಂದ ತುತ್ತು ಬಾಯಿಗೆ ಬರದಂತಾಯ್ತು! ಟೀಂ ಇಂಡಿಯಾಕ್ಕೆ ಸೋಲು

ಕೈಗೆ ಬಂದ ತುತ್ತು ಬಾಯಿಗೆ ಬರದಂತಾಯ್ತು! ಟೀಂ ಇಂಡಿಯಾಕ್ಕೆ ಸೋಲು
ಬರ್ಮಿಂಗ್ ಹ್ಯಾಮ್ , ಮಂಗಳವಾರ, 5 ಜುಲೈ 2022 (16:34 IST)
ಬರ್ಮಿಂಗ್ ಹ್ಯಾಮ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ 7 ವಿಕೆಟ್ ಗಳಿಂದ ಭರ್ಜರಿಯಾಗಿ ಗೆಲ್ಲುವುದರೊಂದಿಗೆ ಸರಣಿ ಸಮಬಲಗೊಳಿಸಿತು.

ದ್ವಿತೀಯ ಇನಿಂಗ್ಸ್ ನಲ್ಲಿ ಭಾರತೀಯ ಬೌಲರ್ ಗಳ ಹಳಿ ತಪ್ಪಿದ ಬೌಲಿಂಗ್, ಇಂಗ್ಲೆಂಡ್ ನ ಘಟಾನುಘಟಿ ಬ್ಯಾಟಿಗ ಜೋ ರೂಟ್, ಜಾನಿ ಬೇರ್ ಸ್ಟೋ ಅವರ ದಾಖಲೆಯ 269 ರನ್ ಗಳ ಜೊತೆಯಾಟ ಟೀಂ ಇಂಡಿಯಾ ಸೋಲಿಗೆ ಕಾರಣವಾಯ್ತು.

ಜೋ ರೂಟ್ ಅಜೇಯ 142 ರನ್, ಬೇರ್ ಸ್ಟೋ ಅಜೇಯ 114 ರನ್ ಗಳಿಸಿದರು. ವಿಶೇಷವೆಂದರೆ ಬೇರ್ ಸ್ಟೋ ಮೊದಲ ಇನಿಂಗ್ಸ್ ನಲ್ಲೂ ಶತಕ ಸಿಡಿಸಿದ್ದರು.  ಹೀಗಾಗಿ ಎರಡೂ ಇನಿಂಗ್ಸ್ ಗಳಲ್ಲಿ ಶತಕ ಸಿಡಿಸಿದ ದಾಖಲೆ ಅವರದ್ದಾಯ್ತು. ಇವರಿಬ್ಬರ ಜೊತೆಯಾಟ 2001 ರ ಕೋಲ್ಕೊತ್ತಾ ಟೆಸ್ಟ್ ನಲ್ಲಿ ವಿವಿಎಸ್ ಲಕ್ಷ್ಮಣ್-ದ್ರಾವಿಡ್ ಜೊತೆಯಾಟವನ್ನು ನೆನೆಪಿಸಿತು.

ಅಂತಿಮವಾಗಿ ಇಂಗ್ಲೆಂಡ್ 3 ವಿಕೆಟ್ ನಷ್ಟಕ್ಕೆ 378 ರನ್ ಗಳಿಸುವ ಮೂಲಕ ಗೆಲುವು ಸಾಧಿಸಿತು. ಮೊದಲ ಇನಿಂಗ್ಸ್ ನಲ್ಲಿ 125 ರನ್ ಗಳ ಹಿನ್ನಡೆಯಿದ್ದರೂ ಇಂಗ್ಲೆಂಡ್ ಇಷ್ಟು ದೊಡ್ಡ ಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟಲು ಈ ಇಬ್ಬರು ಬ್ಯಾಟಿಗರು ಬಂಡೆಯಂತೆ ನಿಂತು ಆಡಿದ್ದು ಕಾರಣವಾಯ್ತು.

Share this Story:

Follow Webdunia kannada

ಮುಂದಿನ ಸುದ್ದಿ

ವೇಸ್ಟ್ ಕೋಚ್: ದ್ರಾವಿಡ್ ಮೇಲೆ ಹರಿಹಾಯ್ದ ನೆಟ್ಟಿಗರು