Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬರ್ಮಿಂಗ್ ಹ್ಯಾಮ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಿರಾಶಾದಾಯಕ ಪ್ರದರ್ಶನ ನೋಡಿ ನೆಟ್ಟಿಗರು ಕೋಚ್ ದ್ರಾವಿಡ್ ಮೇಲೆ ಹರಿಹಾಯ್ದಿದ್ದಾರೆ.
ದ್ರಾವಿಡ್ ಕೋಚ್ ಆದ ಮೇಲೆ ಟೀಂ ಇಂಡಿಯಾ ಪ್ರದರ್ಶನ ಸುಧಾರಿಸಬಹುದೆಂಬ ವಿಶ್ವಾಸವಿತ್ತು. ಆದರೆ ಆ ಭರವಸೆಗಳು ಸುಳ್ಳಾಗುತ್ತಿವೆ. ಟೀಂ ಇಂಡಿಯಾ ಪದೇ ಪದೇ ಸೋಲು ಕಾಣುತ್ತಿರುವುದರಿಂದ ಅಭಿಮಾನಿಗಳು ಕೋಚ್ ದ್ರಾವಿಡ್ ಮೇಲೆ ಸಿಟ್ಟಾಗಿದ್ದಾರೆ.
ದ್ರಾವಿಡ್ ಒಬ್ಬ ವೇಸ್ಟ್ ಕೋಚ್ ಎಂದು ಕೆಲವರು ಜರೆದರೆ ಮತ್ತೆ ಕೆಲವರು ಈಗ ನಮಗೆ ವಿಶ್ವಕಪ್ ಮೇಲೂ ಯಾವುದೇ ಭರವಸೆ ಉಳಿದಿಲ್ಲ ಎಂದಿದ್ದಾರೆ. ದ್ರಾವಿಡ್ ಮಾತ್ರವಲ್ಲದೆ, ಬೌಲಿಂಗ್ ಕೋಚ್ ಪರಸ್ ಮಾಂಬ್ರೆ ಬಗ್ಗೆಯೂ ಭಾರೀ ಟೀಕೆ ಕೇಳಿಬಂದಿದೆ. ರಾಹುಲ್ ದ್ರಾವಿಡ್ ಮತ್ತು ಅವರ ತಂಡ ಕೋಚಿಂಗ್ ಗೆ ಸರಿಯಾದ ಆಯ್ಕೆಯಲ್ಲ ಎಂದು ಕೆಲವರು ಕಿಡಿ ಕಾರಿದ್ದಾರೆ.