Publish Date: Fri, 02 Jul 2021 (09:37 IST)
Updated Date: Fri, 02 Jul 2021 (09:45 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ರೋಹಿತ್ ಶರ್ಮಾ ಮುಂಬೈ ಹೊರವಲಯ ಲೋನಾವಾಲದಲ್ಲಿರುವ ಮನೆಯನ್ನು ಮಾರಾಟ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಮುಂಬೈ ವಾಸಿಗಳಿಗೆ ರಜಾ ದಿನಗಳನ್ನು ಕಳೆಯಲು ಮೆಚ್ಚಿನ ತಾಣವಾಗಿರುವ ಪ್ರಕೃತಿ ಮಡಿಲಲ್ಲಿರುವ ಲೋನಾವಾಲ ಪ್ರದೇಶದಲ್ಲಿ ರೋಹಿತ್ 6,329 ಚದರ ಅಡಿಯ ಬಂಗಲೆಯೊಂದನ್ನು ಹೊಂದಿದ್ದರು.
ಅದನ್ನೀಗ 5.25 ಕೋಟಿ ರೂ.ಗೆ ಮುಂಬೈ ಮೂಲದ ಸುಷ್ಮಾ ಅಶೋಕ್ ಸರಫ್ ಎಂಬವರಿಗೆ ಮಾರಾಟ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಮುಂಬೈ ಮಹಾನಗರಿಗೆ ಕೆಲವೇ ಗಂಟೆಗಳ ದೂರದಲ್ಲಿರುವ ಈ ಪ್ರದೇಶ ಪ್ರವಾಸಿಗರಿಗೆ, ಬಿಡುವಿನ ವೇಳೆಯನ್ನು ಕಳೆಯ ಬಯಸುವವರಿಗೆ ಮೆಚ್ಚಿನ ತಾಣವಾಗಿದೆ.