Publish Date: Thu, 01 Jul 2021 (10:24 IST)
Updated Date: Thu, 01 Jul 2021 (10:12 IST)
ಲಂಡನ್: ಈಗಾಗಲೇ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಮುಗಿದಿದ್ದು, ಮತ್ತೊಂದು ವಿಶ್ವ ಟೆಸ್ಟ್ ಸರಣಿಯನ್ನು ಎದುರಿಸಲು ಭಾರತ ಸಜ್ಜಾಗಿದೆ.
ಮೂಲಗಳ ಪ್ರಕಾರ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಿಂದಲೇ ಎರಡನೇ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಸರಣಿ ಆರಂಭವಾಗುತ್ತಿದೆ. ಆಗಸ್ಟ್ 2021 ರಿಂದ ಜೂನ್ 2023 ರವರೆಗೆ ನಡೆಯಲಿರುವ ವಿವಿಧ ದೇಶಗಳ ಟೆಸ್ಟ್ ಸರಣಿಯ ಅಂಕಗಳನ್ನು ಆಧರಿಸಿ ಫೈನಲ್ ಗೆ ಎರಡು ತಂಡಗಳು ಆಯ್ಕೆಯಾಗಲಿವೆ.
ಒಟ್ಟಾರೆಯಾಗಿ ಈ ಅವಧಿಯಲ್ಲಿ ಏಳು ಮೂರು ಟೆಸ್ಟ್ ಪಂದ್ಯಗಳ ಸರಣಿಯಿದ್ದು, 13 ಎರಡು ಟೆಸ್ಟ್ ಪಂದ್ಯಗಳ ಸರಣಿಯಿದೆ. ಟೀಂ ಇಂಡಿಯಾಕ್ಕೆ ಇಂಗ್ಲೆಂಡ್ ವಿರುದ್ಧದ ಹಾಲಿ ಸರಣಿಯಲ್ಲದೆ, ಆಸ್ಟ್ರೇಲಿಯಾ ವಿರುದ್ಧ ವರ್ಷಾಂತ್ಯಕ್ಕೆ ಟೆಸ್ಟ್ ಸರಣಿಯಿದೆ. ಚಾಂಪಿಯನ್ ಶಿಪ್ ಫೈನಲ್ ಗೆ ಅರ್ಹತೆ ಪಡೆಯಲು ಈ ಎರಡು ವರ್ಷಗಳ ಅವಧಿಯಲ್ಲಿ ಪ್ರತೀ ತಂಡಗಳೂ ಮೂರು ತವರಿನಲ್ಲಿ ಮೂರು ವಿದೇಶೀ ನೆಲದಲ್ಲಿ ಸೇರಿದಂತೆ ಒಟ್ಟು ಆರು ಟೆಸ್ಟ್ ಸರಣಿ ಪಂದ್ಯಗಳನ್ನಾಡಬೇಕಿದೆ.