Publish Date: Fri, 02 Jul 2021 (10:24 IST)
Updated Date: Fri, 02 Jul 2021 (10:14 IST)
ಲಂಡನ್: ಗಾಯಗೊಂಡ ಆರಂಭಿಕ ಶುಬ್ನಂ ಗಿಲ್ ಸ್ಥಾನಕ್ಕೆ ಟೀಂ ಇಂಡಿಯಾದಲ್ಲಿ ಈಗ ಮಯಾಂಕ್ ಅಗರ್ವಾಲ್ ಮತ್ತು ಹನುಮ ವಿಹಾರಿ ನಡುವೆ ಪ್ರಬಲ ಪೈಪೋಟಿಯಿದೆ.
ಮೊದಲು ಮಯಾಂಕ್ ಅಗರ್ವಾಲ್ ಅವರನ್ನೇ ಗಿಲ್ ಸ್ಥಾನದಲ್ಲಿ ಕಣಕ್ಕಿಳಿಸಬಹುದು ಎಂಬ ಸುದ್ದಿಯಿತ್ತು. ಆದರೆ ಈಗ ಗಿಲ್ ಬದಲು ಪ್ರತಿಭಾವಂತ ಹನುಮ ವಿಹಾರಿಗೆ ಅವಕಾಶ ನೀಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಹನುಮ ವಿಹಾರಿ ಕಳೆದ ಬಾರಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಕೆಳ ಕ್ರಮಾಂಕದಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದರು. ಹೀಗಾಗಿ ಅವರಿಗೇ ಮಣೆ ಹಾಕುವ ಸಾಧ‍್ಯತೆಯಿದೆ ಎನ್ನಲಾಗುತ್ತಿದೆ. ಒಂದು ವೇಳೆ ಹನುಮ ವಿಹಾರಿ ಆಯ್ಕೆಯಾದರೆ ಮಯಾಂಕ್ ಮತ್ತೆ ತಮ್ಮ ಅವಕಾಶಕ್ಕಾಗಿ ಕಾಯಬೇಕಾಗುತ್ತದೆ.