ಮುಂಬೈ: ಐಪಿಎಲ್ 2024 ರಲ್ಲಿ 24.5 ಕೋಟಿ ರೂ. ಸಂಭಾವನೆ ಪಡೆದು ಇತಿಹಾಸ ಸೃಷ್ಟಿಸಿದ ಮಿಚೆಲ್ ಸ್ಟಾರ್ಕ್ ಈಗ ಎಲ್ಲರ ಕೇಂದ್ರಬಿಂದುವಾಗಿದ್ದಾರೆ.
ಭಾರತದ ಸ್ಟಾರ್ ಆಟಗಾರರಿಗಿಂತಲೂ ಮಿಚೆಲ್ ಸ್ಟಾರ್ಕ್ ಈಗ ದುಬಾರಿ ಆಟಗಾರನೆನಿಸಿಕೊಂಡಿದ್ದಾರೆ. ಕ್ರಿಕೆಟ್ ಲೋಕದ ಸ್ಟಾರ್ ಗಳಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಧೋನಿಗೆ ಕೂಡಾ ಇದರ ಅರ್ಧದಷ್ಟು ಸಂಭಾವನೆ ಇದೆಯಷ್ಟೇ.
ಆರ್ ಸಿಬಿ ಪರ ಆಡುವ ವಿರಾಟ್ ಕೊಹ್ಲಿ 17 ಕೋಟಿ ರೂ., ಮುಂಬೈ ಪರ ಆಡುವ ರೋಹಿತ್ ಶರ್ಮಾ 16 ಕೋಟಿ ರೂ., ಸಿಎಸ್ ಕೆ ನಾಯಕ ಧೋನಿ 12 ಕೋಟಿ ರೂ. ವೇತನ ಪಡೆಯುತ್ತಾರೆ. ಆ ಮಟ್ಟಿಗೆ ಹೋಲಿಸುವುದಾದರೆ ಸ್ಟಾರ್ಕ್ ದುಪ್ಪಟ್ಟು ವೇತನ ಪಡೆಯಲಿದ್ದಾರೆ.
ಭಾರತದ ಈ ಸ್ಟಾರ್ ಆಟಗಾರರು ಈಗ ಹರಾಜಿಗೊಳಗಾದಲ್ಲಿ ಇದೇ ರೀತಿ ದಾಖಲೆಯ ಬೆಲೆ ಬರುತ್ತಿತ್ತೇನೋ. ಆದರೆ ದುರದೃಷ್ಟ ಈ ಸ್ಟಾರ್ ಆಟಗಾರರನ್ನು ಯಾವ ಫ್ರಾಂಚೈಸಿಯೂ ಬಿಟ್ಟುಕೊಡುವುದಿಲ್ಲ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.