ಮುಂಬೈ: ಐಪಿಎಲ್ 2024 ರಲ್ಲಿ 24.5 ಕೋಟಿ ರೂ.ಗೆ ಸೇಲ್ ಆಗಿ ಇತಿಹಾಸ ಸೃಷ್ಟಿಸಿದ ಮಿಚೆಲ್ ಸ್ಟಾರ್ಕ್ ಬಗ್ಗೆ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಪ್ರತಿಕ್ರಿಯಿಸಿದ್ದಾರೆ.
ಕಳೆದ 8 ವರ್ಷಗಳಿಂದ ಐಪಿಎಲ್ ನಿಂದಲೇ ದೂರವಿರುವ ಒಬ್ಬ ಆಟಗಾರನಿಗೆ ಇಷ್ಟೊಂದು ದುಬಾರಿ ಮೊತ್ತ ಕೊಟ್ಟು ಖರೀದಿ ಮಾಡುವ ಅಗತ್ಯವಿತ್ತೇ ಎಂದು ಅನಿಲ್ ಕುಂಬ್ಳೆ ಕಳವಳ ವ್ಯಕ್ತಪಡಿಸಿದ್ದಾರೆ.
ಐಪಿಎಲ್ 2024 ಹರಾಜು ಪ್ರಕ್ರಿಯೆ ನೋಡುತ್ತಿದ್ದರೆ ವಿರಾಟ್ ಕೊಹ್ಲಿಯಂತಹ ಬಿಗ್ ಪ್ಲೇಯರ್ಸ್ ಏನು ನಡೀತಾ ಇದೆ ಇಲ್ಲಿ ಎಂದು ಹೇಳುತ್ತಿರಬಹುದು ಎಂದು ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ.
ಐಪಿಎಲ್ ನಲ್ಲಿ ಸಕ್ರಿಯವಾಗಿಯೇ ಇರದ, ಅದರಲ್ಲೂ ವಿದೇಶೀ ಆಟಗಾರನ ಮೇಲೆ ಇಷ್ಟೊಂದು ದೊಡ್ಡ ಮೊತ್ತ ಹೂಡಿಕೆ ಮಾಡುವುದರ ಅಗತ್ಯವೇನಿದೆ ಎಂದು ಅನಿಲ್ ಕುಂಬ್ಳೆ ಪ್ರಶ್ನೆ ಮಾಡಿದ್ದಾರೆ. ಇದು ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಐಪಿಎಲ್ ಹರಾಜು ಪ್ರಕ್ರಿಯೆಗಳಲ್ಲಿ ಒಬ್ಬ ಆಟಗಾರನ ಮೇಲೆ ಹೂಡಿಕೆ ಮಾಡುವ ಹಣ ಎಷ್ಟರಮಟ್ಟಿಗೆ ತಲುಪಬಹುದು ಎಂದು ಹಲವರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.