Publish Date: Thursday, 09 June 2022 (08:30 IST)
Updated Date: Thursday, 09 June 2022 (09:17 IST)
ಮುಂಬೈ: ದ.ಆಫ್ರಿಕಾ ವಿರುದ್ಧ ನಡೆಯಲಿರುವ ಟಿ20 ಸರಣಿಗೆ ನಾಯಕರಾಗಿ ಆಯ್ಕೆಯಾಗಿದ್ದ ಕೆಎಲ್ ರಾಹುಲ್ ಸರಣಿ ಆರಂಭಕ್ಕೂ ಮೊದಲೇ ಗಾಯಾಳುವಾಗಿ ಕೂಟದಿಂದ ಹೊರನಡೆದಿದ್ದಾರೆ. ಇದು ನೆಟ್ಟಿಗರ ಟೀಕೆಗೆ ಗುರಿಯಾಗಿದೆ.
ರಾಹುಲ್ ಗೆ ಟೀಂ ಇಂಡಿಯಾ ಪರ ಆಡುವಾಗ ಪದೇ ಪದೇ ಗಾಯದ ಸಮಸ್ಯೆಯಾಗುತ್ತದೆ. ಆದರೆ ಐಪಿಎಲ್ ನಲ್ಲಿ ದಿನಗಟ್ಟಲೇ ಆಡಿದರೂ ಏನೂ ಆಗಲ್ಲ? ಇದು ಹೇಗೆ ಸಾಧ‍್ಯ? ಎಲ್ಲವೂ ದುಡ್ಡಿನ ಮಹಿಮೆ ಎಂದು ನೆಟ್ಟಿಗರು ಟೀಕಿಸಿದ್ದಾರೆ.
ಐಪಿಎಲ್ ಗೂ ಮೊದಲೂ ಗಾಯಾಳುವಾಗಿದ್ದ ಕೆಎಲ್ ರಾಹುಲ್ ಟೀಂ ಇಂಡಿಯಾದಿಂದ ಹೊರಗುಳಿದಿದ್ದರು. ಬಳಿಕ ಐಪಿಎಲ್ ಆಡುವಾಗ ಏನೂ ಸಮಸ್ಯೆಯಿರಲಿಲ್ಲ. ಆದರೆ ಈಗ ಅಭ್ಯಾಸದ ವೇಳೆ ಗಾಯವಾಗಿದೆ. ಇದೇ ರೀತಿ ಕುಲದೀಪ್ ಯಾದವ್ ಕೂಡಾ ನೆಟ್ ಪ್ರಾಕ್ಟೀಸ್ ವೇಳೆ ಗಾಯಗೊಂಡಿದ್ದಾರೆ. ಇದನ್ನೂ ಕೂಡಾ ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.