Select Your Language

Notifications

webdunia
webdunia
webdunia
webdunia

ಗಾಯಾಳು ಕೆಎಲ್ ರಾಹುಲ್ ಟಿ-20 ಸರಣಿಯಿಂದ ಔಟ್: ಪಂತ್ ಗೆ ಒಲಿದ ನಾಯಕ ಪಟ್ಟ!

Rishabh Pant India captain KL Rahul SA series ರಿಷಭ್ ಪಂತ್ ಭಾರತ ಕೆಎಲ್ ರಾಹುಲ್ ಕೆಎಲ್ ರಾಹುಲ್
bengaluru , ಬುಧವಾರ, 8 ಜೂನ್ 2022 (21:36 IST)
ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿ ಆರಂಭಕ್ಕೂ ಮುನ್ನವೇ ನಾಯಕ ಕೆಎಲ್ ರಾಹುಲ್ ಗಾಯಗೊಂಡು ಸರಣಿಯಿಂದ ಹೊರಬಿದ್ದಿದ್ದು, ವಿಕೆಟ್ ಕೀಪರ್ ರಿಷಭ್ ಪಂತ್ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತಿದ್ದಾರೆ.
ಭಾರತ ತಂಡ ಈಗಾಗಲೇ ಹಿರಿಯ ಆಟಗಾರರಾದ ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಜಸ್ ಪ್ರೀತ್ ಬುಮ್ರಾ ಸೇರಿದಂತೆ ಪ್ರಮುಖ ಆಟಗಾರರ ಸೇವೆ ಕಳೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಸರಣಿಯನ್ನು ತಂಡವನ್ನು ಮುನ್ನಡೆಸಬೇಕಾಗಿದ್ದ ಕೆಎಲ್ ರಾಹುಲ್ ಗಾಯಗೊಂಡು ಸರಣಿಯಿಂದ ಬಹುತೇಕ ಹೊರಬಿದ್ದಿದ್ದಾರೆ.
ದೆಹಲಿಯಲ್ಲಿ ಗುರುವಾರ ಸರಣಿಯ ಮೊದಲ ಟಿ-20 ಪಂದ್ಯ ನಡೆಯಲಿದ್ದು, ಇಂದು ಉಭಯ ತಂಡಗಳ ನಾಯಕರು ಸುದ್ದಿಗೋಷ್ಠಿಯಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ ಬಿಸಿಸಿಐ ಉಪನಾಯಕ ರಿಷಭ್ ಪಂತ್ ಸರಣಿಯಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಘೋಷಿಸಿ ಅಚ್ಚರಿ ಮೂಡಿಸಿತು.
ಇತ್ತೀಚೆಗಷ್ಟೇ ಮುಕ್ತಾಯಗೊಂಡ ಐಪಿಎಲ್ ಟಿ-20 ಟೂರ್ನಿಯಲ್ಲಿ ಕೆಎಲ್ ರಾಹುಲ್ ಸೇರಿದಂತೆ ಹಲವು ಆಟಗಾರರು ಪಾಲ್ಗೊಂಡಿದ್ದು, ಐಪಿಎಲ್ ನಿಂದ ಆಟಗಾರರಿಗೆ ಗಾಯದ ಸಮಸ್ಯೆ ಹೆಚ್ಚಾಗುತ್ತಿದೆಯೇ ಎಂಬ ಚರ್ಚೆಗೆ ಮತ್ತೆ ಕಾವು ಕೊಟ್ಟಂತಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ದ.ಆಫ್ರಿಕಾ ಟಿ-20: ಮುಖಾಮುಖಿಯಲ್ಲಿ ಭಾರತವೇ ಮೇಲುಗೈ!