ಮುಂಬೈ: ಹಿಂದೊಮ್ಮೆ ಪತ್ರಿಕಾಗೋಷ್ಠಿಯಲ್ಲಿ ನಿಮಗೆ ಯಾವ ಪುರುಷ ಕ್ರಿಕೆಟ್ ಆಟಗಾರ ಫೇವರಿಟ್ ಎಂಬ ಪ್ರಶ್ನೆಯನ್ನು ಮಿಥಾಲಿ ರಾಜ್ ಗೆ ಕೇಳಲಾಗಿತ್ತು.
ಈ ಪ್ರಶ್ನೆಗೆ ಸಚಿನ್ ಎಂದೋ, ಧೋನಿ ಎಂದೋ ಮಿಥಾಲಿ ಉತ್ತರಿಸಬಹುದು ಎಂಬುದು ಪತ್ರಕರ್ತರ ನಿರೀಕ್ಷೆಯಾಗಿತ್ತು. ಆದರೆ ಮಿಥಾಲಿ ಅಂದು ಮಾಡಿದ್ದ ಪ್ರಶ್ನೆ ಹೊಸ ಕಿಚ್ಚು ಹತ್ತಿಸಿತ್ತು.
ಪುರುಷ ಕ್ರಿಕೆಟಿಗರ ಬಳಿ ಹೋಗಿ ನೀವು ನಿಮಗೆ ಯಾವ ಮಹಿಳಾ ತಾರೆ ಫೇವರಿಟ್ ಎಂದು ಪ್ರಶ್ನಿಸುತ್ತೀರಾ? ಎಂದು ಮಿಥಾಲಿ ಖಾರವಾಗಿ ಆ ಪತ್ರಕರ್ತನಿಗೆ ಪ್ರಶ್ನಿಸಿದ್ದರು. ಈ ಮೂಲಕ ಕ್ರಿಕೆಟ್ ನಲ್ಲಿ ಮಹಿಳೆಯರು ಯಾವ ರೀತಿಯಲ್ಲೂ ಕಡಿಮೆಯಲ್ಲ ಎಂದು ಮಾತಿನ ಮೂಲಕ ಚಾಟಿ ಬೀಸಿದ್ದರು. ಅವರ ಈ ಉತ್ತರ ಸಂಚಲನವನ್ನೇ ಮಾಡಿತ್ತು. ಅಂತಹ ದಿಟ್ಟ ಆಟಗಾರ್ತಿಯ ವೃತ್ತಿ ಜೀವನ ಕೊನೆಯಾಗಿರುವುದಕ್ಕೆ ಇಂದು ಕ್ರಿಕೆಟ್ ಜಗತ್ತು ಬೇಸರ ವ್ಯಕ್ತಪಡಿಸುತ್ತಿದೆ.