Publish Date: Thu, 15 Jun 2023 (10:00 IST)
Updated Date: Thu, 15 Jun 2023 (10:05 IST)
ಬೆಂಗಳೂರು: ಕರ್ನಾಟಕ ಮೂಲದ ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ತಮ್ಮ ಅಭಿಮಾನಿಯೊಬ್ಬರ ಓದಿಗೆ ನೆರವಾಗುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸದ್ಯಕ್ಕೆ ಗಾಯದಿಂದಾಗಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಕೆಎಲ್ ರಾಹುಲ್ ಮಾನವೀಯತೆ ಮೆರೆಯುವ ಮೂಲಕ ಸುದ್ದಿಯಾಗಿದ್ದಾರೆ.
ಬಾಗಲಕೋಟೆಯ ಅಮೃತ ಮಾವಿನಕಟ್ಟಿ ಎಂಬ ಬಡ ವಿದ್ಯಾರ್ಥಿಯ ಓದಿಗೆ ರಾಹುಲ್ 75 ಸಾವಿರ ರೂ. ಕಳುಹಿಸುವ ಮೂಲಕ ನೆರವಾಗಿದ್ದಾರೆ. ರಾಹುಲ್ ಹಣ ಸಹಾಯ ಮಾಡಿದ್ದರಿಂದ ಇದೀಗ ಅಮೃತ್ ಹುಬ್ಬಳ್ಳಿಯ ಕೆಎಲ್ ಇ ಕಾಲೇಜಿನಲ್ಲಿ ಬಿ.ಕಾಂ ಪದವಿಗೆ ಸೇರ್ಪಡೆಯಾಗಿದ್ದಾರೆ. ಶೇ.95 ಮಾರ್ಕ್ ಬಂದಿದ್ದರೂ ಹಣಕಾಸಿನ ಮುಗ್ಗಟ್ಟಿನಿಂದಾಗಿ ವಿದ್ಯಾರ್ಥಿಯ ಓದಿಗೆ ತೊಂದರೆಯಾಗುತ್ತಿತ್ತು. ಈ ವಿಚಾರವನ್ನು ಸ್ಥಳೀಯ ಸಾಮಾಜಿಕ ಕಾರ್ಯಕರ್ತರು ಕೆಎಲ್ ರಾಹುಲ್ ಗಮನಕ್ಕೆ ತಂದಿದ್ದರು. ತಕ್ಷಣವೇ ಸ್ಪಂದಿಸಿದ ರಾಹುಲ್ ಅಮೃತ್ ಅಡ್ಮಿಷನ್ ಫೀಸ್, ಪುಸ್ತಕ ಹಾಗೂ ಇತರೆ ಖರ್ಚುಗಳಿಗಾಗಿ 75 ಸಾವಿರ ರೂ. ನೆರವು ನೀಡಿದ್ದಾರೆ.