Publish Date: Wed, 14 Jun 2023 (09:12 IST)
Updated Date: Wed, 14 Jun 2023 (09:14 IST)
ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ ಸದ್ಯದಲ್ಲೇ ಐಪಿಎಲ್ ಗೆ ನಿವೃತ್ತಿ ಹೇಳಲು ಸಿದ್ಧತೆ ನಡೆಸಿದ್ದಾರಾ? ಸಿಎಸ್ ಕೆಯ ಲೇಟೆಸ್ಟ್ ಪೋಸ್ಟ್ ಗಮನಿಸಿದರೆ ಇಂತಹದ್ದೊಂದು ಅನುಮಾನ ಬಂದಿದೆ.
ಸಿಎಸ್ ಕೆ ತನ್ನ ಸೋಷಿಯಲ್ ಮೀಡಿಯಾ ಪುಟದಲ್ಲಿ ಮೈ ಕ್ಯಾಪ್ಟನ್ ಎಂಬ ಅಡಿಬರಹದೊಂದಿಗೆ ಧೋನಿಯ ಭಾವನಾತ್ಮಕ ವಿಡಿಯೋವೊಂದನ್ನು ಪೋಸ್ಟ್ ಮಾಡಿದೆ.
ಇದನ್ನು ನೋಡಿದ ನೆಟ್ಟಿಗರು ಧೋನಿ ನಿವೃತ್ತಿಯಾಗುತ್ತಿರುವುದಕ್ಕೆ ಸಿಎಸ್ ಕೆ ಇಂತಹದ್ದೊಂದು ಪೋಸ್ಟ್ ಮಾಡಿದೆಯಾ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಧೋನಿ ಈ ಬಾರಿಯ ಐಪಿಎಲ್ ಗೆದ್ದ ಬಳಿಕ ದೇಹ ಸಹಕರಿಸಿದರೆ ಇನ್ನೊಂದು ಐಪಿಎಲ್ ಆಡುವುದಾಗಿ ಹೇಳಿದ್ದರು. ಐಪಿಎಲ್ ಮುಗಿದ ಬೆನ್ನಲ್ಲೇ ಅವರು ಮಂಡಿ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಆದರೆ ಈಗ ಸಿಎಸ್ ಕೆ ಈ ರೀತಿಯ ಪೋಸ್ಟ್ ಮಾಡಿರುವುದರ ಹಿಂದಿನ ಉದ್ದೇಶ ಗೊತ್ತಾಗಿಲ್ಲ.