Publish Date: Wed, 14 Jun 2023 (08:10 IST)
Updated Date: Wed, 14 Jun 2023 (08:33 IST)
ಮುಂಬೈ: ಸತತ ಕ್ರಿಕೆಟ್ ನಿಂದ ಬಳಲಿದ್ದ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಇನ್ನು ಒಂದು ತಿಂಗಳು ಕಾಲ ವಿಶ್ರಾಂತಿ ಯೋಗ! ಒಂದು ತಿಂಗಳ ಬಳಿಕವೇ ಮುಂದಿನ ಟೂರ್ನಿ ಆರಂಭವಾಗಲಿದೆ.
ಇತ್ತೀಚೆಗಷ್ಟೇ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಆಡಿದ್ದ ಆಟಗಾರರು ಈಗ ವಿಶ್ರಾಂತಿ ಪಡೆಯಲಿದ್ದಾರೆ. ಇದರ ನಡುವೆ ಆಫ್ಘಾನಿಸ್ತಾನ ನಡುವೆ ಸರಣಿ ಆಯೋಜನೆಯಾಗಿತ್ತು. ಆದರೆ ಅದು ರದ್ದಾಗಿದೆ. ಹೀಗಾಗಿ ಆಟಗಾರರು ಒಂದು ತಿಂಗಳ ಕಾಲ ಯಾವುದೇ ಪಂದ್ಯಗಳನ್ನು ಆಡಬೇಕಿಲ್ಲ.
ಜುಲೈನಲ್ಲಿ ವೆಸ್ಟ್ ಇಂಡೀಸ್ ಪ್ರವಾಸ ಮಾಡಲಿರುವ ಟೀಂ ಇಂಡಿಯಾ ಟೆಸ್ಟ್, ಏಕದಿನ ಮತ್ತು ಟಿ 20 ಸರಣಿ ಆಡಲಿದೆ. ಜುಲೈ 12 ರಿಂದ ಈ ಸರಣಿಯ ಮೊದಲ ಪಂದ್ಯ ಆರಂಭವಾಗಲಿದೆ.