Publish Date: Thu, 15 Jun 2023 (08:00 IST)
Updated Date: Thu, 15 Jun 2023 (08:20 IST)
ಮುಂಬೈ: ಗಾಯಗೊಂಡು ಸದ್ಯಕ್ಕೆ ಚೇತರಿಸಿಕೊಳ್ಳುತ್ತಿರುವ ಕ್ರಿಕೆಟಿಗ ಕೆಎಲ್ ರಾಹುಲ್ ಏಷ್ಯಾ ಕಪ್ ವೇಳೆ ತಂಡಕ್ಕೆ ವಾಪಸ್ ಆಗುವ ಸಾಧ‍್ಯತೆಯಿದೆ.
ಲಂಡನ್ ನಲ್ಲಿ ಶಸ್ತ್ರಚಿಕಿತ್ಸೆ ಬಳಿಕ ಕೆಲವು ದಿನ ಪತ್ನಿ ಅಥಿಯಾ ಜೊತೆ ಕಾಲ ಕಳೆದಿದ್ದ ರಾಹುಲ್ ಈಗ ತವರು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಬೆಂಗಳೂರಿನ ಎನ್ ಸಿಎನಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಶೀಘ್ರವೇ ಚೇತರಿಸಿಕೊಂಡು ಸಪ್ಟೆಂಬರ್ ನಲ್ಲಿ ನಡೆಯಲಿರುವ ಏಷ್ಯಾ ಕಪ್ ಟೂರ್ನಿ ವೇಳೆಗೆ ತಂಡಕ್ಕೆ ವಾಪಸ್ ಆಗುವ ಗುರಿ ಹೊಂಧಿದ್ದಾರೆ ಕೆಎಲ್ ರಾಹುಲ್.