ಮುಂಬೈ: ಟೀಂ ಇಂಡಿಯಾ ಟೆಸ್ಟ್ ನಾಯಕತ್ವವನ್ನೂ ವಿರಾಟ್ ಕೊಹ್ಲಿ ತ್ಯಜಿಸಿದ್ದು ಯಾಕೆ ಎಂದು ಅವರಿಗೇ ಗೊತ್ತು ಎಂದು ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.
ಸೀಮಿತ ಓವರ್ ಗಳ ನಾಯಕತ್ವ ಕಳೆದುಕೊಂಡ ಮೇಲೆ ಕೊಹ್ಲಿ ಟೆಸ್ಟ್ ನಾಯಕತ್ವವನ್ನೂ ತ್ಯಜಿಸಿದ್ದರು. ಇದರ ಬೆನ್ನಲ್ಲೇ ಟೆಸ್ಟ್ ನಾಯಕತ್ವಕ್ಕೂ ಅವರು ರಾಜೀನಾಮೆ ನೀಡಿದ್ದರು. ಇದಕ್ಕೆ ಆಗಿನ ಬಿಸಿಸಿಐ ಅಧ್ಯಕ್ಷರಾಗಿದ್ದ ಗಂಗೂಲಿ ಜೊತೆಗಿನ ಒಳ ವೈಮನಸ್ಸೂ ಕಾರಣ ಎಂಬಿತ್ಯಾದಿ ಸುದ್ದಿಗಳೂ ಇದ್ದವು.
ಇದೀಗ ಗಂಗೂಲಿ ಈ ಬಗ್ಗೆ ಮಾತನಾಡಿದ್ದು, ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವ ತ್ಯಜಿಸಿದ್ದು ಬಿಸಿಸಿಐಗೆ ಅನಿರೀಕ್ಷಿತವಾಗಿತ್ತು. ದ.ಆಫ್ರಿಕಾ ಟೂರ್ ಬಳಿಕ ನಮಗೂ ಇದು ಅನಿರೀಕ್ಷಿತವಾಗಿತ್ತು. ನಾಯಕತ್ವ ತ್ಯಜಿಸಿದ್ದು ಯಾಕೆ ಎಂದು ಕೊಹ್ಲಿಯೇ ಹೇಳಬೇಕು. ಈಗ ಈ ಬಗ್ಗೆ ಮಾತನಾಡಿ ಪ್ರಯೋಜನವಿಲ್ಲ. ಆಯ್ಕೆಗಾರರು ಯಾರನ್ನಾದರೂ ಒಬ್ಬರನ್ನು ಟೆಸ್ಟ್ ನಾಯಕರಾಗಿ ಆಯ್ಕೆ ಮಾಡಲೇಬೇಕಾಗಿತ್ತು. ಆಗಿನ ಸಂದರ್ಭದಲ್ಲಿ ರೋಹಿತ್ ಅವರಿಗೆ ಅತ್ಯುತ್ತಮ ಆಯ್ಕೆ ಎನಿಸಿತು ಎಂದಿದ್ದಾರೆ.