Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಮುಂಬೈ: ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾ ಆಯ್ಕೆ ನಡೆಯಲಿದ್ದು, ಸ್ಟಾರ್ ಆಟಗಾರರು ಮರಳಲಿದ್ದಾರೆ.
ಇಷ್ಟು ದಿನ ಗಾಯದಿಂದಾಗಿ ಹೊರಗುಳಿದಿದ್ದ ವೇಗಿ ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ ತಂಡಕ್ಕೆ ಮರಳಲಿದ್ದಾರೆ. ಇಬ್ಬರೂ ಕಳೆದ ಆಸ್ಟ್ರೇಲಿಯಾ ಸರಣಿ ವೇಳೆ ಗಾಯಗೊಂಡಿದ್ದರು. ಜಡೇಜಾ ಮೊಣಕಾಲಿನ ಶಸ್ತ್ರ ಚಿಕಿತ್ಸೆಗೊಳಗಾದ ಬಳಿಕ ಸುದೀರ್ಘ ಕಾಲದಿಂದ ಕ್ರಿಕೆಟ್ ಆಡಿಲ್ಲ.
ಇದೀಗ ಕ್ರಿಕೆಟ್ ಕಣಕ್ಕೆ ಮರಳಲು ಸಿದ್ಧರಾಗಿದ್ದಾರೆ. ಕೆಎಲ್ ರಾಹುಲ್, ಕೊಹ್ಲಿ ಮುಂತಾದವರಿಗೆ ವಿಶ್ರಾಂತಿ ನೀಡುವ ಸಾಧ‍್ಯತೆಯಿದ್ದು, ಯುವ ಆಟಗಾರರಿಗೆ ಅವಕಾಶ ಸಿಗುವ ಸಾಧ‍್ಯತೆಯಿದೆ.