Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಢಾಕಾ: ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ನಾಯಕರಾಗಿದ್ದ ಕೆಎಲ್ ರಾಹುಲ್ ಕಳಪೆ ಫಾರ್ಮ್ ಮುಂದುವರಿಸಿದ್ದರು.
ಬಾಂಗ್ಲಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದು ಬಿಟ್ಟರೆ ರಾಹುಲ್ ಬ್ಯಾಟ್ ಸದ್ದು ಮಾಡಲೇ ಇಲ್ಲ. ಈ ಮೊದಲೂ ರಾಹುಲ್ ಕಳಪೆ ಫಾರ್ಮ್ ಪ್ರದರ್ಶಿಸಿದ್ದರು. ಇದು ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿದೆ.
ಇಷ್ಟೊಂದು ಸತತವಾಗಿ ವೈಫಲ್ಯ ಅನುಭವಿಸಿದರೂ ಕೆಎಲ್ ರಾಹುಲ್ ರನ್ನು ಮುಂದಿನ ನಾಯಕ ಎಂದು ಬಿಸಿಸಿಐ ಬಿಂಬಿಸುತ್ತಿರುವುದೇಕೆ? ಇವರಿಗಿಂತ ಬೌಲರ್ ಗಳ ಸ್ಟ್ರೈಕ್ ರೇಟ್ ಉತ್ತಮವಾಗಿದೆ. ಹಾಗಿದ್ದರೂ ರಾಹುಲ್ ಗೆ ತಂಡದಲ್ಲಿ ಖಾಯಂ ಸ್ಥಾನ ನೀಡುತ್ತಿರುವುದರ ಮರ್ಮವೇನು? ಇದು ಪಕ್ಷಪಾತೀ ಧೋರಣೆ. ರಾಹುಲ್ ರನ್ನು ತಕ್ಷಣವೇ ಎಲ್ಲಾ ಫಾರ್ಮ್ಯಾಟ್ ನಿಂದ ಕಿತ್ತು ಹಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.