ಮುಂಬೈ: ಟೆಸ್ಟ್ ಇರಲಿ, ಏಕದಿನ ಇರಲಿ, ಟಿ20 ಇರಲಿ, ಇತ್ತೀಚೆಗಿನ ದಿನಗಳಲ್ಲಿ ಟೀಂ ಇಂಡಿಯಾಗೆ ಆರಂಭಿಕರದ್ದೇ ತಲೆನೋವಾಗಿದೆ.
ಮೂರೂ ಫಾರ್ಮ್ಯಾಟ್ ಗಳಲ್ಲಿ ಆರಂಭಿಕರು ವೈಫಲ್ಯ ಅನುಭವಿಸುತ್ತಿದ್ದಾರೆ. ಇದರಿಂದಾಗಿ ಕೆಳ ಕ್ರಮಾಂಕದ ಬ್ಯಾಟಿಗರ ಮೇಲೆ ಒತ್ತಡ ಬೀಳುತ್ತಿದೆ.
ಕಳೆದ ಪಂದ್ಯದಲ್ಲಿ ಸೀಮಿತ ಓವರ್ ಗಳಲ್ಲಿ ಭಾರತದ ಪರ ರೋಹಿತ್ ಶರ್ಮಾ, ಶಿಖರ್ ಧವನ್, ಕೆಎಲ್ ರಾಹುಲ್, ಇಶಾನ್ ಕಿಶನ್ ಮುಂತಾದವರು ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ. ಟೆಸ್ಟ್ ಪಂದ್ಯದಲ್ಲಿ ಕೆಎಲ್ ರಾಹುಲ್, ಶುಬ್ನಂ ಗಿಲ್ ಆರಂಭಿಕರಾಗಿದ್ದಾರೆ. ಯಾರೇ ಬಂದರೂ ಆರಂಭಿಕ ವಿಕೆಟ್ ನ್ನು ಭಾರತ ಬೇಗನೇ ಕಳೆದುಕೊಳ್ಳುತ್ತಿದೆ.
ಕೊನೆಗೆ ತಂಡದ ಮಾನ ಕಾಪಾಡುವುದು ಕೆಳ ಕ್ರಮಾಂಕದ ಬ್ಯಾಟಿಗರು. ಅತ್ತ ಬೌಲಿಂಗ್ ಕೂಡಾ ದುರ್ಬಲವಾಗಿರುವುದರಿಂದ ಭಾರತಕ್ಕೆ ಗೆಲುವು ಕಷ್ಟವಾಗುತ್ತಿದೆ. ಈ ಹುಳುಕುಗಳನ್ನು ಸರಿಪಡಿಸುವ ಬಗ್ಗೆ ಟೀಂ ಇಂಡಿಯಾ ಗಮನ ಹರಿಸಲೇಬೇಕಿದೆ.