Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಐಪಿಎಲ್ 2024: ಆರ್ ಸಿಬಿ ಪ್ಲೇ ಆಫ್ ಕನಸು ಜೀವಂತವಾಗಿರಿಸಿದ ಐದನೇ ಗೆಲುವು

RCB

Krishnaveni K

ಬೆಂಗಳೂರು , ಸೋಮವಾರ, 13 ಮೇ 2024 (08:17 IST)
Photo Courtesy: X
ಬೆಂಗಳೂರು: ಐಪಿಎಲ್ 2024 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯವನ್ನು 47 ರನ್ ಗಳಿಂದ ಗೆದ್ದ ಆರ್ ಸಿಬಿ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿದೆ. ಇದು ಆರ್ ಸಿಬಿಗೆ ಸತತ ಐದನೇ ಗೆಲುವಾಗಿತ್ತು.

ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿತು. ರಜತ್ ಪಟಿದಾರ್ ತಂಡದ ಬ್ಯಾಟಿಂಗ್ ಹೊಣೆ ಹೊತ್ತರು. 32 ಎಸೆತ ಎದುರಿಸಿದ ಅವರು 52 ರನ್ ಗಳಿಸಿದರೆ ಅವರಿಗೆ ಸಾಥ್ ನೀಡಿದ ವಿಲ್ ಜ್ಯಾಕ್ಸ್ 29 ಎಸೆತಗಳಿಂದ 41 ರನ್ ಗಳಿಸಿದರು. ಕ್ಯಾಮರೂನ್ ಗ್ರೀನ್ ಔಟಾಗದೇ 32 ರನ್ ಗಳಿಸಿದರು. ಉಳಿದವರಿಂದ ಹೇಳಿಕೊಳ್ಳುವ ಕೊಡುಗೆ ಸಿಗಲಿಲ್ಲ.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಡೆಲ್ಲಿ 19.1 ಓವರ್ ಗಳಲ್ಲಿ 140 ರನ್ ಗಳಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು. ರಿಷಬ್ ಪಂತ್ ನಿಷೇಧದ ಹಿನ್ನಲೆಯಲ್ಲಿ ಈ ಪಂದ್ಯದಲ್ಲಿ ಡೆಲ್ಲಿ ಅಕ್ಸರ್ ಪಟೇಲ್ ನೇತೃತ್ವದಲ್ಲಿ ಕಣಕ್ಕಿಳಿಯಿತು. ನಾಯಕನ ಆಟವಾಡಿದ ಅಕ್ಸರ್ ಪಟೇಲ್ 57 ರನ್ ಗಳಿಸಿದರೂ ಅವರಿಗೆ ಉಳಿದವರಿಂದ ಸಾಥ್ ಸಿಗಲಿಲ್ಲ. ಆರ್ ಸಿಬಿ ಪರ ಯಶ್ ದಯಾಳ್ 3, ಫರ್ಗ್ಯುಸನ್ 2, ಕ್ಯಾಮರೂನ್ ಗ್ರೀನ್, ಸ್ವಪ್ನಿಲ್ ಸಿಂಗ್, ಮೊಹಮ್ಮದ್ ಸಿರಾಜ್ ತಲಾ 1 ವಿಕೆಟ್ ಕಬಳಿಸಿದರು.

ಈ ಗೆಲುವಿನೊಂದಿಗೆ ಆರ್ ಸಿಬಿ ಈಗ 13 ಪಂದ್ಯಗಳಿಂದ 6 ಗೆಲುವುಗಳೊಂದಿಗೆ 12 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿತು. ಸತತ ಐದು ಗೆಲುವುಗಳನ್ನು ಪಡೆದ ಆರ್ ಸಿಬಿ ಮಾಡಿದ್ದು ಸಾಧನೆಯೇ ಸರಿ. ಇನ್ನೀಗ ಲೀಗ್ ಹಂತದಲ್ಲಿ ಆರ್ ಸಿಬಿಗೆ ಇನ್ನೊಂದು ಪಂದ್ಯ ಬಾಕಿಯಿದೆ. ಆ ಪಂದ್ಯವನ್ನು ಉತ್ತಮ ರನ್ ರೇಟ್ ನೊಂದಿಗೆ ಗೆಲ್ಲುವ ಅನಿವಾರ್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತವರಿನಲ್ಲಿ ಇಂದು ಆರ್‌ಸಿಬಿಗೆ ಮಾಡು ಇಲ್ಲವೇ ಮಡಿ ಪಂದ್ಯ