ಕಾನ್ಪುರ: ಭಾರತ ಮತ್ತು ಬಾಂಗ್ಲಾದೇಶ ನಡುವೆ ಮಳೆಯಿಂದಾಗಿ ತಡವಾಗಿ ಟಾಸ್ ಆಗಿದ್ದು, ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ. ಈ ಮೂಲಕ 9 ವರ್ಷಗಳ ಬಳಿಕ ಭಾರತದಲ್ಲಿ ಟೆಸ್ಟ್ ಪಂದ್ಯಗಳಲ್ಲಿ ಟಾಸ್ ಗೆದ್ದೂ ಮೊದಲು ಬ್ಯಾಟಿಂಗ್ ಮಾಡಿದ ದಾಖಲೆ ಮಾಡಿದೆ.
ಕಾನ್ಪುರ ಪಿಚ್ ಸ್ಲೋ ಟರ್ನಿಂಗ್ ಪಿಚ್ ಆಗಿದ್ದು, ಭಾರತ ಮೊದಲು ಫೀಲ್ಡಿಂಗ್ ಮಾಡುವ ನಿರ್ಧಾರ ಮಾಡಿದೆ. ಭಾರತ ತಂಡ ಕಾನ್ಪುರದಲ್ಲಿ ಯಾವುದೇ ತಂಡ ಟಾಸ್ ಗೆದ್ದೂ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿರುವುದು ಇದು ಎರಡನೇ ಬಾರಿ ಮಾತ್ರ. ಈ ಪಂದ್ಯಕ್ಕೆ ಭಾರತ ತಂಡದಲ್ಲಿ ನಿರೀಕ್ಷೆಯಂತೇ ಯಾವುದೇ ಬದಲಾವಣೆಯಿಲ್ಲ.
ಅತ್ತ ಬಾಂಗ್ಲಾದೇಶ ನಾಯಕ ನಜ್ಮುಲ್ ಹುಸೈನ್ ಕೂಡಾ ಒಂದು ವೇಳೆ ನಾವು ಟಾಸ್ ಗೆದ್ದಿದ್ದರೂ ಮೊದಲು ಬ್ಯಾಟಿಂಗ್ ಮಾಡುತ್ತಿದ್ದೆವು ಎಂದಿದ್ದಾರೆ. ಈ ಪಂದ್ಯದಲ್ಲಿ ಬಾಂಗ್ಲಾ ಎರಡು ಬದಲಾವಣೆ ಮಾಡಿಕೊಂಡಿದ್ದು ನಹೀದ್ ಮತ್ತು ಟಸ್ಕಿನ್ ಅಹಮ್ಮದ್ ಬದಲಿಗೆ ತೈಜುಲ್ ಇಸ್ಲಾಮ್ ಮತ್ತು ಖಲೀದ್ ಅಹ್ಮದ್ ಅವರನ್ನು ಆಡಿಸುತ್ತಿದೆ.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್.
ಬಾಂಗ್ಲಾದೇಶ: ಶಡ್ಮನ್ ಇಸ್ಲಾಮ್, ಝಾಕಿರ್ ಹಸನ್, ನಜ್ಮುಲ್ ಹುಸೈನ್ (ನಾಯಕ), ಮೊಮಿನುಲ್ ಹಕ್, ಮುಷ್ಫಿಕರ್ ರಹೀಂ, ಶಕೀಬ್ ಅಲ್ ಹಸನ್, ಲಿಟನ್ ದಾಸ್ (ನಾಯಕ), ಮೆಹದಿ ಹಸನ್ ಮಿರಾಜ್, ತೈಜುಲ್ ಇಸ್ಲಮ್, ಹಸನ್ ಮೆಹಮೂದ್, ಖಲೀದ್ ಅಹ್ಮದ್.