Publish Date: Thu, 02 Jul 2020 (10:40 IST)
Updated Date: Thu, 02 Jul 2020 (10:42 IST)
ಲಂಡನ್: ಕೊರೋನಾ ನಡುವೆಯೂ ಇಂಗ್ಲೆಂಡ್ ನಲ್ಲಿ ಕ್ರಿಕೆಟ್ ಮರಳಿ ಶುರುವಾಗಿದೆ. ಆದರೆ ಪಂದ್ಯದ ನಡುವೆ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಲಾಗುತ್ತಿದೆ.
ಇಂಗ್ಲೆಂಡ್ ದೇಶೀಯ ಕ್ರಿಕೆಟ್ ಪಂದ್ಯವೊಂದರಲ್ಲಿ ಖ್ಯಾತ ವೇಗಿ ಜೇಮ್ಸ್ ಆಂಡರ್ಸನ್ ವಿಕೆಟ್ ಪಡೆದು ಸಂಭ್ರಮಿಸಿದ ಪರಿ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸಾಮಾನ್ಯವಾಗಿ ವಿಕೆಟ್ ಉರುಳಿಸಿದ ಬಳಿಕ ಸಹ ಆಟಗಾರರು ಪರಸ್ಪರ ತಬ್ಬಿಕೊಂಡು ಸಂಭ್ರಮಪಡುತ್ತಾರೆ. ಆದರೆ ಈಗ ಕೊರೋನಾ ಕಾರಣದಿಂದಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾಗಿದೆ. ಹೀಗಾಗಿ ಆಂಡರ್ಸನ್ ಹಾಗೂ ಸಹ ಆಟಗಾರರು ಮೊಣಕೈಗೆ ಮೊಣಕೈ ಸೋಕಿಸಿ ವಿಶಿಷ್ಟವಾಗಿ ಸೆಲೆಬ್ರೇಟ್ ಮಾಡುವ ವಿಡಿಯೋವನ್ನು ಇಂಗ್ಲೆಂಡ್ ಕ್ರಿಕೆಟ್ ಟ್ವೀಟ್ ಮಾಡಿದೆ. ಇದೀಗ ವೈರಲ್ ಆಗಿದೆ.