Publish Date: Wed, 01 Jul 2020 (09:57 IST)
Updated Date: Wed, 01 Jul 2020 (09:59 IST)
ಸಿಡ್ನಿ: ಆಸ್ಟ್ರೇಲಿಯಾದಲ್ಲಿ ಡಿಸೆಂಬರ್ ನಲ್ಲಿ ನಡೆಯಲಿರುವ ಭಾರತ-ಆಸ್ಟ್ರೇಲಿಯಾ ಬಾಕ್ಸಿಂಗ್ ಡೇ ಟೆಸ್ಟ್ ಸರಣಿ ಈಗ ನಡೆಯುವುದು ಅನುಮಾನವೆನಿಸಿದೆ.
ಕೊರೋನಾ ಪ್ರಕರಣಗಳು ಹೆಚ್ಚಿನ ಹಿನ್ನಲೆಯಲ್ಲಿ ಆಸ್ಟ್ರೇಲಿಯಾ ಈಗಾಗಲೇ ಆಗಸ್ಟ್ ನಲ್ಲಿ ನಡೆಯಬೇಕಿದ್ದ ಜಿಂಬಾಬ್ವೆ ಜತೆಗಿನ ಏಕದಿನ ಸರಣಿಯನ್ನು ರದ್ದುಗೊಳಿಸಿದೆ. ಇದೀಗ ಡಿಸೆಂಬರ್ ವರೆಗೆ ಕಾಲಾವಕಾಶವಿದ್ದರೂ ಈಗ ಕೊರೋನಾ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವುದರಿಂದ ಡಿಸೆಂಬರ್ ನಲ್ಲಿ ಮೆಲ್ಬೋರ್ನ್ ನ ಮೈದಾನದಲ್ಲಿ ನಡೆಯಬೇಕಿರುವ ಟೆಸ್ಟ್ ಸರಣಿ ನಡೆಯುವುದು ಸಂಶಯವಾಗಿದೆ. ಸದ್ಯದ ಬೆಳವಣಿಗೆ ಗಮನಿಸಿದರೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಈ ವರ್ಷ ಪೂರ್ತಿ ಟೂರ್ನಿಗಳನ್ನು ರದ್ದುಗೊಳಿಸಲು ಚಿಂತನೆ ನಡೆಸಿದೆ.