Publish Date: Thu, 02 Jul 2020 (09:13 IST)
Updated Date: Thu, 02 Jul 2020 (09:14 IST)
ಬೆಂಗಳೂರು: ನವರಸನಾಯಕ ಜಗ್ಗೇಶ್ ಸಾಮಾಜಿಕ ಸೇವೆಗಳ ಮೂಲಕ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ಕೊರೋನಾ ಭಯದಲ್ಲಿದ್ದ ಮಲ್ಲೇಶ್ವರ ನಿವಾಸಿಗಳಿಗೆ ಜಗ್ಗೇಶ್ ಸಹಾಯ ಮಾಡಿದ್ದಾರೆ.
ಮಲ್ಲೇಶ್ವರದ ಮಣಿಪಾಲ ಆಸ್ಪತ್ರೆಯನ್ನು ಕೊರೋನಾ ರೋಗಿಗಳ ಶುಶ್ರೂಷೆಗೆ ಬಳಸಲು ತೀರ್ಮಾನಿಸಲಾಗಿದೆ. ಆದರೆ ಇದರ ಅಕ್ಕಪಕ್ಕ ಸ್ವತಃ ಜಗ್ಗೇಶ್ ನಿವಾಸವಲ್ಲದೆ, ಹಿರಿಯ ನಟಿ ಸರೋಜದೇವಿ ಮತ್ತು ಅನೇಕ ಹಿರಿಯ ನಾಗರಿಕರು ವಾಸ ಮಾಡುವ ನಿವಾಸಗಳಿವೆ.
ಹೀಗಾಗಿ ಇಲ್ಲಿ ಕೊರೋನಾ ರೋಗಿಗಳನ್ನು ಕರೆದೊಯ್ಯಲು ಆಂಬ್ಯುಲೆನ್ಸ್ ಓಡಾಡುವುದರಿಂದ ಇಲ್ಲಿನ ನಿವಾಸಿಗಳಿಗೆ ಕೊರೋನಾ ಹರಡುವ ಭಯ ಎದುರಾಗಿತ್ತು. ಇದೀಗ ಇಲ್ಲಿನ ನಿವಾಸಿಗಳಿಗೆ ತೊಂದರೆಯಾಗದಂತೆ ಬ್ಯಾರಿಕೇಡ್ ಗಳನ್ನು ನಿರ್ಮಿಸಿ ಆಂಬ್ಯಲೆನ್ಸ್ ಓಡಾಡಲು ಅನುವು ಮಾಡಿಕೊಟ್ಟಿದ್ದಾರೆ ಜಗ್ಗೇಶ್. ಬಿಜೆಪಿ ನಾಯಕರಾಗಿರುವ ಜಗ್ಗೇಶ್ ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ಬಳಿ ಮಾತನಾಡಿ ಸ್ವತಃ ತಾವೇ ಮುಂದೆ ನಿಂತು ಸಮಸ್ಯೆ ಬಗೆಹರಿಸಿಕೊಟ್ಟಿದ್ದಾರೆ.