Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

2011 ಏಕದಿನ ವಿಶ್ವಕಪ್ ಮ್ಯಾಚ್ ಫಿಕ್ಸಿಂಗ್ ಆರೋಪ: ಲಂಕಾ ದಿಗ್ಗದ ಕುಮಾರ ಸಂಗಕ್ಕಾರಗೆ ಸಮನ್ಸ್ ಜಾರಿ

2011 ಏಕದಿನ ವಿಶ್ವಕಪ್ ಮ್ಯಾಚ್ ಫಿಕ್ಸಿಂಗ್ ಆರೋಪ: ಲಂಕಾ ದಿಗ್ಗದ ಕುಮಾರ ಸಂಗಕ್ಕಾರಗೆ ಸಮನ್ಸ್ ಜಾರಿ
ಕೊಲೊಂಬೊ , ಗುರುವಾರ, 2 ಜುಲೈ 2020 (10:13 IST)
ಕೊಲೊಂಬೊ: ಭಾರತದಲ್ಲಿ ನಡೆದಿದ್ದ 2011 ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಫಿಕ್ಸಿಂಗ್ ನಡೆದಿತ್ತು ಎಂಬ ಆರೋಪಗಳ ಬಗ್ಗೆ ಲಂಕಾ ಸರ್ಕಾರ ಸ್ವತಂತ್ರ ತನಿಖಾ ಸಮಿತಿ ನೇಮಿಸಿ ವಿಚಾರಣೆ ನಡೆಸುತ್ತಿದೆ.

 

ಈ ನಿಟ್ಟಿನಲ್ಲಿ ಅಂದು ಲಂಕಾ ತಂಡದ ನಾಯಕರಾಗಿದ್ದ ಕುಮಾರ ಸಂಗಕ್ಕಾರಗೆ ಸಮನ್ಸ್ ಜಾರಿ ಮಾಡಲಾಗಿದ್ದು ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ.

2011 ರ ಏಕದಿನ ವಿಶ್ವಕಪ್ ಫೈನಲ್ ನಲ್ಲಿ ಭಾರತ-ಶ್ರೀಲಂಕಾ ಮುಖಾಮುಖಿಯಾಗಿತ್ತು. ಈ ಪಂದ್ಯವನ್ನು ಭಾರತ ಗೆದ್ದು ಚಾಂಪಿಯನ್ ಆಗಿತ್ತು. ಆದರೆ ಈ ಪಂದ್ಯ ಫಿಕ್ಸ್ ಆಗಿತ್ತು ಎಂದು ಅಂದು ಲಂಕಾ ಕ್ರೀಡಾ ಸಚಿವರಾಗಿದ್ದ ಅತುಲಗಮಗೆ ಆರೋಪಿಸಿದ್ದರು. ಆ ಆರೋಪಕ್ಕೆ ಸಂಬಂಧಿಸಿದಂತೆ ಈಗ ಲಂಕಾ ಸರ್ಕಾರ ತನಿಖೆಗೆ ಮುಂದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಸಿಸಿ ಮುಖ್ಯಸ್ಥ ಸ್ಥಾನ ತ್ಯಜಿಸಿದ ಶಶಾಂಕ್ ಮನೋಹರ್