Publish Date: Thu, 19 Oct 2023 (11:31 IST)
Updated Date: Thu, 19 Oct 2023 (09:49 IST)
ಪುಣೆ: ಏಕದಿನ ವಿಶ್ವಕಪ್ ಕ್ರಿಕೆಟ್ ನಲ್ಲಿ ಇಂದು ಪುಣೆ ಮೈದಾನದಲ್ಲಿ ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗುತ್ತಿದೆ.
ಮೂರು ಪಂದ್ಯಗಳಿಂದ ಮೂರೂ ಗೆಲುವು ದಾಖಲಿಸಿರುವ ಟೀಂ ಇಂಡಿಯಾ ಇಂದಿನ ಪಂದ್ಯಕ್ಕೆ ಬೌಲಿಂಗ್ ವಿಭಾಗದಲ್ಲಿ ಬದಲಾವಣೆ ಮಾಡುವ ಸಾಧ‍್ಯತೆಯಿದೆ.
ಕಳೆದ ಎರಡು ಪಂದ್ಯಗಳಲ್ಲಿ ಶಾರ್ದೂಲ್ ಠಾಕೂರ್ ಗೆ ಅವಕಾಶ ನೀಡಿಯೂ ಹೆಚ್ಚಿನ ಪರಿಣಾಮ ಬೀರಿಲ್ಲ. ಹೀಗಾಗಿ ಇಂದು ಮತ್ತೆ ರವಿಚಂದ್ರನ್ ಅಶ್ವಿನ್ ಅಥವಾ ವೇಗಿ ಮೊಹಮ್ಮದ್ ಶಮಿಗೆ ಮೊದಲ ಬಾರಿಗೆ ಈ ವಿಶ್ವಕಪ್ ನಲ್ಲಿ ಅವಕಾಶ ಸಿಗುವ ಸಾಧ‍್ಯತೆಯಿದೆ. ಉಳಿದಂತೆ ಬೇರೆ ಬದಲಾವಣೆ ಸಾಧ‍್ಯತೆ ಕಡಿಮೆ.