ಅಹಮ್ಮದಾಬಾದ್: ಇತ್ತೀಚೆಗೆ ಅಹಮ್ಮದಾಬಾದ್ ನಲ್ಲಿ ನಡೆದಿದ್ದ ಭಾರತ-ಪಾಕ್ ನಡುವಿನ ಪಂದ್ಯದ ವೇಳೆ ಪ್ರೇಕ್ಷಕರ ವರ್ತನೆ ಮತ್ತು ಪಾಕ್ ಪತ್ರಕರ್ತರು, ಅಭಿಮಾನಿಗಳಿಗೆ ವೀಸಾ ನಿರಾಕರಣೆ ಕುರಿತಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಐಸಿಸಿಗೆ ದೂರು ಸಲ್ಲಿಸಿದೆ.
ಭಾರತ-ಪಾಕ್ ಪಂದ್ಯದ ವೇಳೆ ಮೈದಾನದಲ್ಲಿ ಪಾಕ್ ಕ್ರಿಕೆಟಿಗ ರಿಜ್ವಾನ್ ನಮಾಜ್ ಮಾಡಿದ್ದಕ್ಕೆ ಪ್ರೇಕ್ಷಕರು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದರು. ಇನ್ನು, ಪಂದ್ಯದ ವೇಳೆ ಪಾಕ್ ಬೆಂಬಲಿಗರು ಯಾರೂ ಇರಲಿಲ್ಲ ಎಂದು ಪಾಕ್ ಕೋಚ್ ಮಿಕಿ ಅರ್ಥರ್ ದೂರಿದ್ದರು.
ಇದೀಗ ಪಾಕ್ ಕ್ರಿಕೆಟ್ ಮಂಡಳಿ ಈ ಕುರಿತಂತೆ ಐಸಿಸಿಗೆ ಅಧಿಕೃತ ದೂರು ಸಲ್ಲಿಸಿದೆ. ಪ್ರೇಕ್ಷಕರು ಅತಿರೇಕವಾಗಿ ವರ್ತಿಸಿದ್ದಾರೆ ಮತ್ತು ಪಾಕ್ ಪತ್ರಕರ್ತರಿಗೆ ವೀಸಾ ವಿಳಂಬ ಮಾಡಲಾಗುತ್ತಿದೆ ಎಂದು ಭಾರತದ ವಿರುದ್ಧ ಪಾಕ್ ದೂರಿದೆ.