Publish Date: Wed, 18 Oct 2023 (16:18 IST)
Updated Date: Wed, 18 Oct 2023 (16:20 IST)
ಪುಣೆ: ನಾಳೆ ನಡೆಯಲಿರುವ ಬಾಂಗ್ಲಾದೇಶ ವಿರುದ್ಧದ ಏಕದಿನ ವಿಶ್ವಕಪ್ ಪಂದ್ಯಕ್ಕೆ ಟೀಂ ಇಂಡಿಯಾ ಆಟಗಾರರು ನಿನ್ನೆ ಸಂಜೆಯಿಂದಲೇ ನೆಟ್ಸ್ ಪ್ರಾಕ್ಟೀಸ್ ಶುರು ಮಾಡಿದ್ದಾರೆ.
ವಿಶೇಷವೆಂದರೆ ನಾಯಕ ರೋಹಿತ್ ಶರ್ಮಾ ನೆಟ್ಸ್ ನಲ್ಲಿ ಆಫ್ ಸ್ಪಿನ್ ಬೌಲಿಂಗ್ ಮಾಡಿ ಗಮನ ಸೆಳೆದಿದ್ದಾರೆ. ರೋಹಿತ್ ಕೆಲವು ವರ್ಷಗಳ ಮೊದಲು ಬೌಲಿಂಗ್ ಮಾಡುತ್ತಿದ್ದರು. ಆದರೆ ಬೆರಳು ನೋವಿನ ಸಮಸ್ಯೆಯಾಗುತ್ತಿದ್ದರಿಂದ ಬ್ಯಾಟಿಂಗ್ ಗೆ ಸಮಸ್ಯೆಯಾಗುತ್ತದೆ ಎಂಬ ಕಾರಣಕ್ಕೆ ಬೌಲಿಂಗ್ ಮಾಡುವುದನ್ನು ಬಿಟ್ಟಿದ್ದರು.
ಆದರೆ ಇದೀಗ ಟೀಂ ಇಂಡಿಯಾ ಅಭ್ಯಾಸದ ವೇಳೆ ಮತ್ತೆ ಬೌಲಿಂಗ್ ಮಾಡಿ ಗಮನ ಸೆಳೆದಿದ್ದಾರೆ. ಈ ವಿಶ್ವಕಪ್ ನಲ್ಲಿ ಸ್ಪಿನ್ ಬೌಲರ್ ಗಳು ಗಮನಾರ್ಹ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ ರೋಹಿತ್ ಮತ್ತೆ ಬೌಲಿಂಗ್ ಗಿಳಿಯಬಹುದೇ ಎಂಬ ಕುತೂಹಲ ಅಭಿಮಾನಿಗಳದ್ದು.