Select Your Language

Notifications

webdunia
webdunia
webdunia
webdunia

ಏಕದಿನ ವಿಶ್ವಕಪ್ ಕ್ರಿಕೆಟ್: ಅಫ್ಘನ್ ವಿರುದ್ಧ ನ್ಯೂಜಿಲೆಂಡ್ ತಿಣುಕಾಟ

ಏಕದಿನ ವಿಶ್ವಕಪ್ ಕ್ರಿಕೆಟ್: ಅಫ್ಘನ್ ವಿರುದ್ಧ ನ್ಯೂಜಿಲೆಂಡ್ ತಿಣುಕಾಟ
ಚೆನ್ನೈ , ಬುಧವಾರ, 18 ಅಕ್ಟೋಬರ್ 2023 (16:09 IST)
ಚೆನ್ನೈ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಇಂದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನ ವಿರುದ್ಧ ಪಂದ್ಯ ನಡೆಯುತ್ತಿದ್ದು, ನ್ಯೂಜಿಲೆಂಡ್ ಬ್ಯಾಟರ್ ಗಳು ಪರದಾಡುವಂತಾಗಿದೆ.

ಚೆನ್ನೈನ ಟರ್ನಿಂಗ್ ಪಿಚ್ ನಲ್ಲಿ ಅಫ್ಘಾನಿಸ್ತಾನ ಬೌಲರ್ ಗಳ ದಾಳಿಗೆ ಕಿವೀಸ್ ಬ್ಯಾಟರ್ ಗಳು ಪರದಾಡುವಂತಾಗಿದೆ. ಇತ್ತೀಚೆಗಿನ ವರದಿ ಬಂದಾಗ 26 ಓವರ್ ಗಳಲ್ಲಿ ನ್ಯೂಜಿಲೆಂಡ್ 4 ವಿಕೆಟ್ ನಷ್ಟಕ್ಕೆ 123 ರನ್ ಗಳಿಸಿದೆ. ವಿಲ್ ಯಂಗ್ 54, ರಚಿನ್ ರವೀಂದ್ರ 32 ರನ್ ಗಳಿಸಿ ಔಟಾಗಿದ್ದಾರೆ. ಇದೀಗ ನಾಯಕ ಟಾಮ್ ಲಥಮ್ 9 ಮತ್ತು ಗ್ಲೆನ್ ಫಿಲಿಪ್ಸ್ 4 ರನ್ ಗಳಿಸಿ ಆಡುತ್ತಿದ್ದಾರೆ.

ನ್ಯೂಜಿಲೆಂಡ್ ಇದುವರೆಗೆ ನಡೆದ ಎಲ್ಲಾ ಪಂದ್ಯಗಳಲ್ಲಿ ಜಯ ಗಳಿಸಿತ್ತು. ಆದರೆ ಇಂದು ಸ್ಪಿನ್ ಪಿಚ್ ನಲ್ಲಿ ಕಿವೀಸ್ ಬ್ಯಾಟಿಗರು ರನ್ ಗಳಿಸಲು ಕೊಂಚ ಎಡವಿದ್ದಾರೆ. ಕಳೆದ ಪಂದ್ಯದಲ್ಲಿ ಅಫ್ಘಾನಿಸ್ತಾನ ಪ್ರಬಲ ಇಂಗ್ಲೆಂಡ್ ಗೇ ಸೋಲುಣಿಸಿತ್ತು. ಹೀಗಾಗಿ ಇಂದಿನ ಪಂದ್ಯದಲ್ಲಿ ಕಿವೀಸ್ ಕೂಡಾ ಎಚ್ಚರ ತಪ್ಪಿದರೆ ಅಪಾಯ ಖಂಡಿತಾ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದ ವಿರುದ್ಧ ಐಸಿಸಿಗೆ ದೂರು ಸಲ್ಲಿಸಿದ ಪಾಕಿಸ್ತಾನ ಕ್ರಿಕೆಟ್ ಮಂಡಳಿ