Publish Date: Tue, 12 May 2020 (09:20 IST)
Updated Date: Tue, 12 May 2020 (09:23 IST)
ಬೆಂಗಳೂರು: ಲಾಕ್ ಡೌನ್ ಮುಂದುವರಿಸಬೇಕೋ ಬೇಡವೋ ಎಂಬ ಬಗ್ಗೆ ಜನರು ಈಗ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.
ಲಾಕ್ ಡೌನ್ ಮುಂದುವರಿಸುವ ಬಗ್ಗೆ ನಮ್ಮನ್ನು ಆಳುವ ನಾಯಕರಿಗೆ ಒಲವಿದೆ. ಇದಕ್ಕೆ ಕೆಲವು ವರ್ಗದ ಜನರೂ ಬೆಂಬಲ ನೀಡುತ್ತಿದ್ದಾರೆ. ಆದರೆ ಮಧ‍್ಯಮ ವರ್ಗದವರು ಮಾತ್ರ ಆಸಕ್ತಿ ತೋರುತ್ತಿಲ್ಲ.
ಯಾಕೆಂದರೆ ದುಡಿದು ತಿನ್ನುವ ವರ್ಗಕ್ಕೆ ಲಾಕ್ ಡೌನ್ ಎಂದು ಘೋಷಿಸಿ ಅಲ್ಪಸ್ವಲ್ಪ ಸಡಿಲಿಕೆ ಮಾಡುತ್ತಿರುವುದರಿಂದ ಭಾರೀ ಹಿನ್ನಡೆಯಾಗಿದೆ. ಲಾಕ್ ಡೌನ್ ಮಾಡುವುದಿದ್ದರೆ ಎರಡು ವಾರ ಕಂಪ್ಲೀಟ್ ಲಾಕ್ ಡೌನ್ ಮಾಡಲಿ. ಒಬ್ಬ ಮನುಷ್ಯನಿಗೂ ಮನೆಯಿಂದ ಹೊರ ಬರಲು ಅವಕಾಶ ಕೊಡದಂತೆ ಬಿಗಿಗೊಳಿಸಿ. ಅದರ ಬದಲು ಲಾಕ್ ಡೌನ್ ಎಂದು ಘೋಷಿಸಿ ಮದ್ಯ ಮಾರಾಟಕ್ಕೆ ಅವಕಾಶ ಕೊಡುವುದು, ಅಂಗಡಿ ತೆರೆಯಲು ಅವಕಾಶ ಕೊಡುವುದು, ಸಂಚಾರಕ್ಕೆ ಅವಕಾಶ ಕೊಡುವುದು.. ಇತ್ಯಾದಿ ಮಾಡುವುದರಿಂದ ಕೊರೋನಾ ನಿಯಂತ್ರಣವಂತೂ ಆಗುತ್ತಿಲ್ಲ. ಹಾಗಿದ್ದ ಮೇಲೆ ಲಾಕ್ ಡೌನ್ ಮುಂದುವರಿಸುವುದರಲ್ಲಿ ಅರ್ಥವಿದೆಯೇ ಎಂದು ಹಲವರು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಶ್ನಿಸುತ್ತಿದ್ದಾರೆ.