ಬೆಂಗಳೂರು: ಲಾಕ್ ಡೌನ್ 3 ಯಲ್ಲಿ ರಾಜ್ಯ ಸರ್ಕಾರ ಶೂಟಿಂಗ್ ಹೊರತುಪಡಿಸಿ ಉಳಿದ ಸಿನಿಮಾ ಕೆಲಸಗಳಿಗೆ ಒಪ್ಪಿಗೆಯೇನೋ ನೀಡಿದೆ. ಆದರೆ ಇದು ಶೂಟಿಂಗ್, ಸಿನಿಮಾ ಪ್ರದರ್ಶನಕ್ಕೆ ಅನ್ವಯವಾಗುವಿದಿಲ್ಲ.
ಹೀಗಾಗಿ ಹೊಸ ಸಿನಿಮಾ ರಿಲೀಸ್ ಮಾಡಲು, ಶೂಟಿಂಗ್ ಮಾಡಲು ಸಿನಿಮಾ ಮಂದಿ ಕೆಲವು ದಿನ ಕಾಯಲೇಬೇಕು. ಸಿನಿಮಾ ಶೂಟಿಂಗ್ ಎಂದರೆ ಹಲವಾರು ಜನರು ಒಟ್ಟಿಗೆ ಕೆಲಸ ಮಾಡಬೇಕಾಗುತ್ತದೆ. ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ನೂರಾರು ಜನ ಸೇರುತ್ತಾರೆ.
ಇವೆಲ್ಲವೂ ಕೊರೋನಾ ದೃಷ್ಟಿಯಿಂದ ಅಪಾಯಕಾರಿ. ಹೀಗಾಗಿ ಇವೆರಡೂ ಪ್ರಮುಖ ಆದಾಯ ತರುವಂತಹ ಕೆಲಸಗಳಿಗೆ ಸ್ಯಾಂಡಲ್ ವುಡ್ ಕೆಲವು ದಿನ ಕಾಯಲೇಬೇಕಾಗುತ್ತದೆ. ಶೂಟಿಂಗ್ ಇಲ್ಲದೇ ಇರುವ ಕಾರಣ, ಸರ್ಕಾರದ ತೆರೆಮರೆಯ ಚಟುವಟಿಕೆಗಳಿಗೆ ಒಪ್ಪಿಗೆ ನೀಡುವ ನಿರ್ಧಾರದಿಂದ ಕಾರ್ಮಿಕರಿಗೆ ಲಾಭವೇನೂ ಆಗದು. ಹೀಗಾಗಿ ಸಿನಿ ಕಾರ್ಮಿಕರು ಇನ್ನೂ ಕೆಲವು ದಿನ ತುತ್ತು ಅನ್ನಕ್ಕಾಗಿ ಪರದಾಡಲೇಬೇಕಾಗುತ್ತದೆ.