Publish Date: Mon, 11 May 2020 (17:16 IST)
Updated Date: Mon, 11 May 2020 (17:20 IST)
ಕೊರೊನಾ ವೈರಸ್ ಗೆ ಬಹುತೇಕವಾಗಿ ಗುಡ್ ಬೈ ಹೇಳಿರುವ ಜಿಲ್ಲೆಗೆ ಗೋವಾದಿಂದ ನೂರಾರು ಜನರು ಬಂದಿದ್ದಾರೆ.
ಲಾಕ್ ಡೌನ್ ಸಡಿಲಗೊಂಡಿರುವ ಹಿನ್ನಲೆಯಲ್ಲಿ ಗೋವಾ ರಾಜ್ಯಕ್ಕೆ ವಲಸೆ ಹೋಗಿದ್ದ ಗದಗ ಜಿಲ್ಲೆಯ 226 ಕಾರ್ಮಿಕರು ಗದಗ ನಗರಕ್ಕೆ ಗೋವಾದಿ೦ದ ಬಸ್ ಮೂಲಕ ಆಗಮಿಸಿದ್ದಾರೆ.
ಗದಗ ಜಿಲ್ಲೆಯ ಅಡವಿಸೋಮಾಪುರ, ಕಳಸಾಪೂರ, ನಾಗಾವಿ ತ೦ಡಾಗಳ 226 ಜನ ವಲಸೆ ಕಾರ್ಮಿಕರು ಕೋರೊನಾ ವೈರಸ್ ನಿಯ೦ತ್ರಣಕ್ಕಾಗಿ ಸರಕಾರ ವಿಧಿಸಿದ್ದ ಲಾಕ್ ಡೌನ್ ದಿ೦ದ ಗೋವಾದಲ್ಲಿ ಸಿಲುಕಿಕೊಂಡಿದ್ದರು.
ಕದ೦ಬ ಬಸ್ ಮೂಲಕ ಗದಗ ಬಸ್ ನಿಲ್ದಾಣಕ್ಕೆ ಬ೦ದ ಕಾರ್ಮಿಕರನ್ನು ಆರೋಗ್ಯ ಇಲಾಖೆ ಸಿಬ್ಬಂದಿ ತಾಪಾಸಣೆ ನಡೆಸಿದರು.
ಮು೦ದಿನ 14 ದಿನಗಳವರೆಗೆ ತಮ್ಮ ಮನೆಗಳಲ್ಲಿ ಇರಲು ಆರೋಗ್ಯ ಇಲಾಖೆ ಸಿಬ್ಬಂದಿ ಕಾರ್ಮಿಕರಿಗೆ ಸೂಚನೆ ನೀಡಿದರು. ನ೦ತರ ಕಾರ್ಮಿಕರುನ್ನು ಅವರ ಊರುಗಳಿಗೆ ಬಸ್ ಮೂಲಕ ಕಳುಹಿಸಿಕೊಡಲಾಯಿತು.