Publish Date: Mon, 20 Apr 2020 (10:25 IST)
Updated Date: Mon, 20 Apr 2020 (10:27 IST)
ಮಂಡ್ಯ: ಕೊರೋನಾವೈರಸ್ ನಿಂದಾಗಿ ಪೊಲೀಸರು ಲಾಕ್ ಡೌನ್ ಪರಿಣಾಮಕಾರಿಯಾಗಿ ಜಾರಿ ಮಾಡಲು ದಿನವಿಡೀ ಕೆಲಸ ಮಾಡುತ್ತಿದ್ದಾರೆ. ಇದಕ್ಕಾಗಿ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಮದುವೆಯನ್ನೇ ಮುಂದೂಡಿದ್ದಾರೆ.
ಮಳವಳ್ಳಿ ಡಿವೈಎಸ್ ಪಿ ಎಂ.ಜೆ ಪೃಥ್ವಿ ಎಲ್ಲಾ ಸರಿ ಹೋಗಿದ್ದರೆ ಏಪ್ರಿಲ್ 5 ರಂದು ಪೃಥ್ವಿ ಎಂಬವರ ಜತೆ ಹಸೆಮಣೆ ಏರಬೇಕಾಗಿತ್ತು. ಆದರೆ ಇದೀಗ ವೈಯಕ್ತಿಕ ಜೀವನಕ್ಕಿಂತ ಕರ್ತವ್ಯವೇ ಮುಖ್ಯವೆಂದು ಮದುವೆ ಮುಂದೂಡಿ ಕೆಲಸ ಮಾಡುತ್ತಿದ್ದಾರೆ.
ಈಕೆಯ ನಡೆ ಬಗ್ಗೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಸೇರಿದಂತೆ ನೆಟ್ಟಿಗರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರ ಸೇವೆಗಾಗಿ ವೈಯಕ್ತಿಕ ಜೀವನದ ಖುಷಿ ತ್ಯಾಗ ಮಾಡಿರುವ ಈಕೆಯನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ.