Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಆಸ್ಪತ್ರೆಗಾಗಿ 7 ಕಿ.ಮೀ. ಅಲೆದಾಡಿ ಗಂಡು ಮಗುವಿಗೆ ಜನ್ಮ ನೀಡದ ಮಹಿಳೆ

ಆಸ್ಪತ್ರೆಗಾಗಿ 7 ಕಿ.ಮೀ. ಅಲೆದಾಡಿ ಗಂಡು ಮಗುವಿಗೆ ಜನ್ಮ ನೀಡದ ಮಹಿಳೆ
ಬೆಂಗಳೂರು , ಸೋಮವಾರ, 20 ಏಪ್ರಿಲ್ 2020 (10:09 IST)
ಬೆಂಗಳೂರು: ಲಾಕ್ ಡೌನ್ ನಿಂದಾಗಿ ಇತರ ಖಾಯಿಲೆಗಳಿಗೆ ಆಸ್ಪತ್ರೆ ಸಿಗದೇ ಎಷ್ಟೋ ಜನ ಪರದಾಡುತ್ತಿದ್ದಾರೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಗರ್ಭಿಣಿ ಮಹಿಳೆಯೊಬ್ಬಳು ಆಸ್ಪತ್ರೆಗಾಗಿ 7 ಕಿ.ಮೀ. ಅಲೆದಾಡುತ್ತಾ ಕೊನೆಗೆ ಅವಧಿ ಪೂರ್ಣ ಮಗುವಿಗೆ ಜನ್ಮ ನೀಡಿದ ಘಟನೆ ವಿದ್ಯಾರಣ್ಯಪುರದಲ್ಲಿ ನಡೆದಿದೆ.


ಸುಮಾರು 7 ಕಿ.ಮೀ. ವೈದ್ಯರಿಗಾಗಿ ಹುಡುಕಾಟ ನಡೆಸಿದ ಮಹಿಳೆ ಮತ್ತು ಆಕೆಯ ಪತಿ ಕೊನೆಗೆ ವಿದ್ಯಾರಣ್ಯಪುರದಲ್ಲಿ ಡೆಂಟಲ್ ಕ್ಲಿನಿಕ್ ಒಂದಕ್ಕೆ ಆಗಮಿಸಿದ್ದರು. ಈ ವೇಳೆ ಅಲ್ಲಿಯೂ ದಂತ ವೈದ್ಯರಿರಲಿಲ್ಲ. ಆದರೆ ಮಹಿಳೆ ನಡೆದು ಸುಸ್ತಾಗಿದ್ದರಿಂದ ಆಸ್ಪತ್ರೆಯ ಸಹಾಯಕಿ ಆಕೆಗೆ ಆಶ್ರಯ ನೀಡಿದ್ದರು. ಅಲ್ಲದೆ, ಕ್ಲಿನಿಕ್ ಮಾಲಕರಾದ ದಂತ  ವೈದ್ಯೆ, ಡಾ. ರಮ್ಯಾ ಮತ್ತು ಪತಿಗೆ ವಿಷಯ ತಿಳಿಸಿದ್ದರು.

ಅವರು ಬರುವಷ್ಟರಲ್ಲಿ ಸುಸ್ತಾಗಿದ್ದ ಮಹಿಳೆ ಅವಧಿ ಪೂರ್ಣ ಮಗುವಿಗೆ ಜನ್ಮ ನೀಡಿ ಜ್ಞಾನ ತಪ್ಪಿ ಮಲಗಿದ್ದಳು. ಮಗು ಬದುಕಿಲ್ಲ ಎಂದುಕೊಂಡು ಮಹಿಳೆಯ ಪತಿ ಅದನ್ನು ಒಂದು ಪೇಪರ್ ನಲ್ಲಿ ಸುತ್ತಿ ಹಿಡಿದುಕೊಂಡಿದ್ದರು. ಆದರೆ ದಂತ ವೈದ್ಯ ದಂಪತಿಗಳು ಮಗು ಬದುಕಿದೆಯೆಂದು ಅರಿತು ತಕ್ಷಣವೇ ಕೆಸಿ ಜನರಲ್ ಆಸ್ಪತ್ರೆಗೆ ಸಾಗಿಸಿದರು. ಈಗ ಇಬ್ಬರೂ ಆರೋಗ್ಯವಾಗಿದ್ದಾರೆಂದು ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಾದರಾಯನಪುರದಲ್ಲಿ ಗಲಾಟೆ ಪ್ರಕರಣದಿಂದ ಕೊರೊನಾ 3ನೇ ಹಂತಕ್ಕೆ ತಲುಪುತ್ತಾ?