Publish Date: Mon, 20 Apr 2020 (09:53 IST)
Updated Date: Mon, 20 Apr 2020 (09:54 IST)
ಬೆಂಗಳೂರು: ಸಂಸದ ತೇಜಸ್ವಿ ಸೂರ್ಯ ಐದು ವರ್ಷದ ಹಿಂದೆ ಅರಬ್ ಮಹಿಳೆಯರ ಬಗ್ಗೆ ಮಾಡಿದ ಟ್ವೀಟ್ ಒಂದು ಈಗ ಟ್ವಿಟರ್ ನಲ್ಲಿ ವೈರಲ್ ಆಗಿದ್ದು, ವಿವಾದದ ಕೇಂದ್ರ ಬಿಂದುವಾಗಿದೆ.
ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಐದು ವರ್ಷಗಳ ಹಿಂದೆ 95 ಶೇಕಡಾ ಅರಬ್ ಮಹಿಳೆಯರಿಗೆ ಕಳೆದ ನೂರಾರು ವರ್ಷಗಳಿಂದ ಲೈಂಗಿಕ ಉದ್ರೇಕವೇ ಆಗಿಲ್ಲ. ಎಲ್ಲಾ ತಾಯಂದಿರು ದೈಹಿಕ ಸಂಬಂಧದ ಫಲವಾಗಿ ಮಕ್ಕಳನ್ನು ಹೆತ್ತಿದ್ದಾರೆಯೇ ಹೊರತು, ಪ್ರೇಮ ಸಂಬಂಧದಿಂದಲ್ಲ ಎಂದು ವಿವಾದಾತ್ಮಕ ಟ್ವೀಟ್ ಮಾಡಿದ್ದರು.
ಅದೀಗ ಮತ್ತೆ ಟ್ವಿಟರ್ ನಲ್ಲಿ ಟ್ರೆಂಡ್ ಆಗಿದ್ದು, ತೇಜಸ್ವಿ ಅಂದು ಮಾಡಿದ್ದಾರೆನ್ನಲಾ ಟ್ವೀಟ್ ಬಗ್ಗೆ ಪರ-ವಿರೋಧ ಚರ್ಚೆಗಳಾಗುತ್ತಿವೆ.