ಬೆಂಗಳೂರು: ಲಾಕ್ ಡೌನ್ 2 ಮುಗಿಸಿದ ಬೆನ್ನಲ್ಲೇ ಇಂದಿನಿಂದ ಮೂರನೇ ಅವಧಿಯ ಲಾಕ್ ಡೌನ್ ಆರಂಭವಾಗಿದೆ. ಕೊರೋನಾ ನಿಯಂತ್ರಣ ವಿಚಾರದಲ್ಲಿ ಇನ್ನೂ ಸಂಪೂರ್ಣ ಯಶಸ್ವಿಯಾಗದೇ ಇರುವುದರಿಂದ ಸರ್ಕಾರಕ್ಕೆ ಈ ಕ್ರಮ ಅನಿವಾರ್ಯವಾಗಿದೆ.
ಈಗಾಗಲೇ ಮನೆಯೊಳಗೇ ಒಂದು ತಿಂಗಳಿಗೂ ಅಧಿಕ ಕಾಲ ಕಳೆದ ಮೇಲೆ ಜನ ಒಮ್ಮೆ ಮನೆಯಿಂದ ಹೊರಬರಲು ಅವಕಾಶ ಹುಡುಕುತ್ತಿದ್ದಾರೆ. ಆದರೆ ಈ ಆತುರದಲ್ಲಿ ಲಾಕ್ ಡೌನ್ 3 ನ್ನು ಸರಿಯಾಗಿ ಪಾಲಿಸದೇ ಇದ್ದರೆ ಮತ್ತೆ ತೊಂದರೆ ನಮಗೇ ಎನ್ನುವುದನ್ನು ಜನರು ಅರಿತುಕೊಳ್ಳಬೇಕಿದೆ.
ಗ್ರೀನ್ ವಲಯದಲ್ಲಿ ಮಾತ್ರ ಲಾಕ್ ಡೌನ್ ಸಡಿಲಗೊಳಿಸಲಾಗಿದ್ದು ಉಳಿದೆಡೆ ಯಥಾವತ್ತಾಗಿ ಕಟ್ಟುನಿಟ್ಟಿನ ನಿಯಮಗಳು ಜಾರಿಯಲ್ಲಿರಲಿವೆ. ಈ ಬಾರಿಯಾದರೂ ಜನರು ಲಾಕ್ ಡೌನ್ ನಿಯಮಗಳನ್ನು ಪಾಲಿಸಿ ಕೊರೋನಾ ನಿಯಂತ್ರಣಕ್ಕೆ ಬಂದರೆ ಮಾತ್ರ ಮೇ 17 ರ ಬಳಿಕ ಮುಕ್ತರಾಗುವ ಅವಕಾಶ ಸಿಗಲಿದೆ.