Publish Date: Fri, 22 Feb 2019 (08:45 IST)
Updated Date: Fri, 22 Feb 2019 (08:46 IST)
ಬೆಂಗಳೂರು: ಒಂದೊಂದು ರಾಶಿಯವರ ಗುಣ ಸ್ವಭಾವ ಒಂದೊಂದು ರೀತಿಯಿರುತ್ತದೆ. ದಿನಕ್ಕೊಂದು ರಾಶಿಯವರ ಗುಣ ಮತ್ತು ಅವಗುಣಗಳನ್ನು ತಿಳಿಯುತ್ತಾ ಸಾಗೋಣ.
ಕುಂಭ ರಾಶಿ
ಈ ರಾಶಿಯವರು ಒಂದು ಉದ್ದೇಶಕ್ಕಾಗಿ ಕೆಲಸ ಮಾಡುವವರು. ಜತೆಗೆ ಒಂದು ಗುಂಪಿನಲ್ಲಿ ಜತೆಯಾಗಿ ಕೆಲಸ ಮಾಡುವವರು. ಇವರು ಸ್ನೇಹ ಸ್ವಭಾವದವರು ಮಾತ್ರವಲ್ಲ, ಬುದ್ಧಿವಂತರೂ ಕೂಡಾ. ಅವರು ಎಲ್ಲರ ಒಳಿತಿಗಾಗಿ ಕೆಲಸ ಮಾಡುವ ಸಹೃದಯಿಗಳೂ ಕೂಡಾ.
ಆದರೆ ಅವಗುಣಗಳೆಂದರೆ, ಇವರು ತಮಗೇ ಎಲ್ಲಾ ಗೊತ್ತು ಎನ್ನುವ ಅಹಂ ಭಾವವನ್ನೂ ರೂಡಿಸಿಕೊಳ್ಳುತ್ತಾರೆ. ಹಾಗೆಯೇ ಹಠವಾದಿ ಗುಣ ಇವರ ಕೆಟ್ಟ ಸ್ವಭಾವ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ