ಬೆಂಗಳೂರು: ಸೆಕ್ಸ್ ಗೆ ಸಂಬಂಧಿಸಿದಂತೆ ಹೆಣ್ಣು ಗಂಡಿನ ಅಭಿಪ್ರಾಯಗಳು ಬೇರೆಯದ್ದೆ ಆಗಿರುತ್ತದೆ. ಇಬ್ಬರ ಮನಸ್ಸು ಬೆರೆತರೆ ಮಾತ್ರ ಲೈಂಗಿಕ ಕ್ರಿಯೆಯೂ ಸಂತೃಪ್ತಿ ತರುತ್ತದೆ. ಇಲ್ಲಿ ದೇಹದ ಜತೆಗೆ ಮನಸ್ಸೂ ಕೂಡ ಮುಖ್ಯವಾಗಿರುತ್ತದೆ.
ಸೆಕ್ಸ್ ತೃಪ್ತಿದಾಯಕವಾಗಿರಬೇಕು: ಯಾವುದೋ ಒಂದು ಒತ್ತಡದಿಂದ, ಅಥವಾ ಇದೊಂದು ಕೆಲಸ ಎಂಬ ಭಾವನೆಯಿಂದ ಲೈಂಗಿಕ ಕ್ರೀಯೆಯಲ್ಲಿ ತೊಡಗಬಾರದು. ಇಬ್ಬರ ಮನಸ್ಸು ಹದವಾಗಿ ಬೆರೆತು, ಖುಷಿಯಾಗಿ ಲೈಂಗಿಕ ಕ್ರೀಯೆಯಲ್ಲಿ ತೊಡಗಿದರೆ ಮಾತ್ರ ತೃಪ್ತಿದಾಯಕ ಅನುಭವ ಉಂಟಾಗುತ್ತದೆ.
ಲೈಂಗಿಕ ಪರಾಕಾಷ್ಠೆ ಅನಿವಾರ್ಯವಲ್ಲ : ತನ್ನ ಸಂಗಾತಿಯನ್ನು ಉದ್ರೇಕಗೊಳಿಸುವುದೇ ನಿಜವಾದ ಲೈಂಗಿಕ ಕ್ರೀಯೆಯಲ್ಲ. ಯಾವಾಗಲೂ ಇದರ ಅವಶ್ಯಕತೆ ಇರುವುದಿಲ್ಲ. ಸಂಗಾತಿಯು ಯಾವುದನ್ನು ಇಚ್ಛಿಸುತ್ತಾರೋ ಅದರ ಬಗ್ಗೆ ಮಾತನಾಡಿ ಆಮೇಲೆ ಮುಂದುವರಿಯಿರಿ.
ಸಂಗಾತಿಯನ್ನು ಹೊಗಳಿ: ನಿಮ್ಮ ಸಂಗಾತಿಯನ್ನು ಪರಸ್ಪರ ಸಕಾರಾತ್ಮಕವಾಗಿ ಹೊಗಳಿ. ಇದರಿಂದ ಅವರೂ ಸಂತುಷ್ಟರಾಗುತ್ತಾರೆ. ಜತೆಗೆ ಕೀಳರಿಮೆಯಿಂದ ಹೊರ ಬರುತ್ತಾರೆ. ಆಗ ನಿಮ್ಮ ದಾಂಪತ್ಯ ಸುಮಧರುರವಾಗಿರುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ