ಬೆಂಗಳೂರು: ಗರ್ಭಿಣಿಯಾಗಿರುವಾಗ ಸೆಕ್ಸ್ ಮಾಡುವುದರಿಂದ ಹೆರಿಗೆಗೂ ಕೂಡ ಸಹಾಯವಾಗುತ್ತದೆಯಂತೆ. ಈ ಸಮಯದಲ್ಲಿನ ಸಂಭೋಗದಿಂದ ವೀರ್ಯವು ಹೆಣ್ಣಿನ ಗರ್ಭಕಂಠವನ್ನ ಮೆತ್ತಗೆ ಮಾಡುವುದಲ್ಲದೆ ಹೆಣ್ಣಿನ ಲೈಂಗಿಕ ಪರಾಕಾಷ್ಟೆ ಇಂದ ಗರ್ಭಕೋಶದ ಸಂಕೋಚನಗಳು ಶುರು ಆಗುತ್ತವೆಯಂತೆ.
ಲೈಂಗಿಕ ಕ್ರಿಯೆಯು ಹೆರಿಗೆಗೆ ಈ ರೀತಿಯಲ್ಲಿ ಸಹಾಯವಾಗುತ್ತದೆಯಂತೆ
ಲೈಂಗಿಕ ಪರಾಕಷ್ಟೆಯು ನಿಮ್ಮ ಗರ್ಭಕೋಶದ ಚಲನೆಗಳನ್ನು ಹೆಚ್ಚಿಸುತ್ತವೆಯಂತೆ
ಸಂಭೋಗದಲ್ಲಿ ತೊಡಗುವುದರಿಂದ ಆಕ್ಸಿಟೋಸಿನ್ ಎಂಬ ಹಾರ್ಮೋನ್ ಬಿಡುಗಡೆ ಹೊಂದುತ್ತದೆ. ಈ ಹಾರ್ಮೋನ್ ನಿಮ್ಮ ಸಂಕೋಚನಗಳಿಗೆ ಸಹಾಯಕಾರಿಯಾಗುತ್ತದೆಯಂತೆ.
ನಿಮ್ಮ ಗರ್ಭದ ನೀರಿನ ಚೀಲ ಇನ್ನೂ ಒಡೆಯದೆ ಇದ್ದರೆ, ಲೈಂಗಿಕ ಕ್ರಿಯೆಯು ಸುರಕ್ಷಿತ. ನಿಮ್ಮ ನೀರಿನ ಚೀಲ ಒಡೆದ ಮೇಲೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವುದು ಸೋಂಕು ಉಂಟು ಮಾಡಬಹುದು. ಅಲ್ಲದೆ ನಿಮ್ಮ ಗರ್ಭಚೀಲವು ತುಂಬಾ ಕೆಳಭಾಗದಲ್ಲಿ ಇದ್ದರೆ ಅಥವಾ ನಿಮ್ಮ ಯೋನಿಯಿಂದ ರಕ್ತಸ್ರಾವ ಆಗಿದ್ದರೆ/ಆಗುತ್ತಿದ್ದರೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವುದು ಸೂಕ್ತವಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ